Rishabh Pant: ವಿಕೆಟ್ ಕೀಪಿಂಗ್ ಬಿಟ್ಟು ಬೌಲಿಂಗ್ ಕಡೆ ಮುಖ ಮಾಡಿದ ರಿಷಬ್ ಪಂತ್; ವಿಡಿಯೋ ನೋಡಿ

|

Updated on: Aug 18, 2024 | 4:46 PM

Rishabh Pant: ಈ ಪಂದ್ಯದಲ್ಲಿ ಎದುರಾಳಿ ತಂಡಕ್ಕೆ ಗೆಲುವಿಗೆ ಕೇವಲ ಒಂದು ರನ್ ಬೇಕಾಗಿತ್ತು. ಹೀಗಾಗಿ ರಿಷಬ್ ಪಂತ್ ತಾವೇ ಬೌಲಿಂಗ್ ಮಾಡಲು ಅಖಾಡಕ್ಕಿಳಿದಿದ್ದರು. ಆದರೆ ಪಂತ್ ಎಸೆದ ಮೊದಲ ಎಸೆತದಲ್ಲಿ ಸಿಂಗಲ್ ಕದಿಯುವ ಮೂಲಕ ದಕ್ಷಿಣ ದೆಹಲಿ ಸೂಪರ್‌ಸ್ಟಾರ್ಸ್ ತಂಡ ಜಯದ ನಗೆ ಬೀರಿತು. ಆದಾಗ್ಯೂ ಪಂತ್ ಎಸೆದ ಮೊದಲ ಎಸೆತವೇ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಏಕೆಂದರೆ ರಿಷಬ್ ಪಂತ್ ಲೆಗ್ ಸ್ಪಿನ್ ಬೌಲಿಂಗ್ ಮಾಡಿದರು.

ಚೊಚ್ಚಲ ಆವೃತ್ತಿಯ ದೆಹಲಿ ಪ್ರೀಮಿಯರ್ ಲೀಗ್ ನಿನ್ನೆಯಿಂದ ಆರಂಭವಾಗಿದೆ. ಉದ್ಘಾಟನಾ ಆವೃತ್ತಿಯ ಮೊದಲ ಪಂದ್ಯದಲ್ಲಿ ರಿಷಬ್ ಪಂತ್ ನಾಯಕತ್ವದ ಓಲ್ಡ್ ಡೆಲ್ಲಿ 6 ಹಾಗೂ ದಕ್ಷಿಣ ದೆಹಲಿ ಸೂಪರ್‌ಸ್ಟಾರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಂತ್ ನಾಯಕತ್ವದ ತಂಡ 3 ವಿಕೆಟ್​ಗಳಿಂದ ಸೋಲೊಪ್ಪಿಕೊಂಡಿತ್ತು. ಇದು ಪಂದ್ಯದ ಸಾರಾಂಶವಾದರೆ, ಈ ಪಂದ್ಯದಲ್ಲಿ ಟೀಂ ಇಂಡಿಯಾ ಅಭಿಮಾನಿಗಳು ಇದುವರೆಗೆ ನೋಡಿರಲು ಸಾಧ್ಯವಾಗದ ಘಟನೆಯೊಂದು ಈ ಪಂದ್ಯದಲ್ಲಿ ನಡೆಯಿತು. ಅದೆನೆಂದರೆ ಇದುವರೆಗೆ ನಾವೆಲ್ಲರೂ ವಿಕೆಟ್ ಕೀಪರ್ ರೂಪದಲ್ಲಿ ನೋಡಿದ್ದ ರಿಷಬ್ ಪಂತ್, ಬೌಲರ್ ಆಗಿ ಅದರಲ್ಲೂ ಲೆಗ್ ಸ್ಪಿನರ್​ ಆಗಿ ಕಾಣಿಸಿಕೊಂಡರು. ಈ ಪಂದ್ಯದಲ್ಲಿ ಪಂತ್ ತಂಡ ಸೋಲು ಖಚಿತವಾಗಿತ್ತು. ಎದುರಾಳಿ ತಂಡಕ್ಕೆ ಗೆಲುವಿಗೆ ಕೇವಲ ಒಂದು ರನ್ ಬೇಕಾಗಿತ್ತು. ಹೀಗಾಗಿ ರಿಷಬ್ ಪಂತ್ ತಾವೇ ಬೌಲಿಂಗ್ ಮಾಡಲು ಅಖಾಡಕ್ಕಿಳಿದಿದ್ದರು. ಆದರೆ ಪಂತ್ ಎಸೆದ ಮೊದಲ ಎಸೆತದಲ್ಲಿ ಸಿಂಗಲ್ ಕದಿಯುವ ಮೂಲಕ ದಕ್ಷಿಣ ದೆಹಲಿ ಸೂಪರ್‌ಸ್ಟಾರ್ಸ್ ತಂಡ ಜಯದ ನಗೆ ಬೀರಿತು. ಆದಾಗ್ಯೂ ಪಂತ್ ಎಸೆದ ಮೊದಲ ಎಸೆತವೇ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಏಕೆಂದರೆ ರಿಷಬ್ ಪಂತ್ ಲೆಗ್ ಸ್ಪಿನ್ ಬೌಲಿಂಗ್ ಮಾಡಿದರು.

ಬ್ಯಾಟಿಂಗ್​ನಲ್ಲಿ ರಿಷಬ್ ಪಂತ್ ಫ್ಲಾಪ್

ಈ ಪಂದ್ಯದಲ್ಲಿ ರಿಷಬ್ ಪಂತ್ ಬ್ಯಾಟಿಂಗ್​ನಲ್ಲಿ ಸಪ್ಪೆ ಪ್ರದರ್ಶನ ನೀಡಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅವರ ಬ್ಯಾಟ್‌ನಿಂದ 32 ಎಸೆತಗಳಲ್ಲಿ ಕೇವಲ 35 ರನ್ ಮಾತ್ರ ಬಂದವು. ಈ ಇನ್ನಿಂಗ್ಸ್‌ನಲ್ಲಿ ಪಂತ್ 4 ಬೌಂಡರಿ ಹಾಗೂ ಒಂದು ಸಿಕ್ಸರ್‌ ಕೂಡ ಬಾರಿಸಿದರು. ಆದಾಗ್ಯೂ ಆರಂಭಿಕ ಅರ್ಪಿತ್ ರಾಣಾ ಸಿಡಿಸಿದ 59 ರನ್‌ ಮತ್ತು ಡೆತ್ ಓವರ್‌ನಲ್ಲಿ ವಂಶ್ ಬೇಡಿ 19 ಎಸೆತಗಳಲ್ಲಿ ಸಿಡಿಸಿದ 47 ರನ್​ಗಳಿಂದ ಓಲ್ಡ್ ಡೆಲ್ಲಿ 6 ತಂಡ 197 ರನ್‌ ಕಲೆಹಾಕಿತು. ಇದಕ್ಕೆ ಉತ್ತರವಾಗಿ ದಕ್ಷಿಣ ದೆಹಲಿ ಸೂಪರ್‌ಸ್ಟಾರ್ಸ್ 5 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು. ತಂಡದ ಪರ ನಾಯಕ ಆಯುಷ್ ಬದೋನಿ 29 ಎಸೆತಗಳಲ್ಲಿ 57 ರನ್‌ಗಳ ಇನಿಂಗ್ಸ್‌ ಆಡಿದರೆ, ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ 30 ಎಸೆತಗಳಲ್ಲಿ 57 ರನ್ ಬಾರಿಸಿ ತಂಡಕ್ಕೆ ಗೆಲುವಿನ ಶುಭಾರಂಭ ನೀಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ