ಪ್ರಾಸಿಕ್ಯೂಷನ್​ಗೆ ಅನುಮತಿ: ಉಪವಾಸ ಸತ್ಯಾಗ್ರಹ ನಿರತ ಸಿದ್ದರಾಮಯ್ಯ ಅಭಿಮಾನಿ ಅಸ್ವಸ್ಥ

ಪ್ರಾಸಿಕ್ಯೂಷನ್​ಗೆ ಅನುಮತಿ: ಉಪವಾಸ ಸತ್ಯಾಗ್ರಹ ನಿರತ ಸಿದ್ದರಾಮಯ್ಯ ಅಭಿಮಾನಿ ಅಸ್ವಸ್ಥ

ಅಮೀನ್​ ಸಾಬ್​
| Updated By: ಗಂಗಾಧರ​ ಬ. ಸಾಬೋಜಿ

Updated on: Aug 18, 2024 | 6:04 PM

ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನಿನ್ನೆ ಅನುಮತಿ ಕೊಟ್ಟಿದ್ದೇ ತಡ ಕಾಂಗ್ರೆಸ್‌ ಕಾರ್ಯಕರ್ತರು, ಸಿದ್ದು ಅಭಿಮಾನಿಗಳು ನಿನ್ನೆಯೇ ರಸ್ತೆಗೆ ಇಳಿದಿದ್ರು. ಇವತ್ತು ಕೂಡಾ ರಾಜ್ಯದ ಉದ್ದಗಲಕ್ಕೂ ಹೋರಾಟ ಮುಂದುವರಿದಿತ್ತು. ಇತ್ತ ಯಾದಗಿರಿಯಲ್ಲಿ ಸಿದ್ದರಾಮಯ್ಯ ಅಭಿಮಾನಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತ್ತಿದ್ದು, ಸತ್ಯಾಗ್ರಹದಲ್ಲಿ ನಿರತವಾಗಿರುವಾಗಲೇ ​ಅಸ್ವಸ್ಥಗೊಂಡಿರುವಂತಹ ಘಟನೆ ನಡೆದಿದೆ.

ಯಾದಗಿರಿ, ಆಗಸ್ಟ್​ 18: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ವಿಚಾರವಾಗಿ ಕರ್ನಾಟಕದಲ್ಲಿ ಎಲ್ಲೆಡೆ ಕಾಂಗ್ರೆಸ್​ ಕಾರ್ಯಕರ್ತರಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಇತ್ತ ನಗರದ ಸುಭಾಷ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕದ ಸಿದ್ದರಾಮಯ್ಯ (Siddaramaiah) ಅಭಿಮಾನಿ ಬ್ರಿಗೇಡ್ ರಾಜ್ಯಾಧ್ಯಕ್ಷ ರಾಜಕುಮಾರ್ ಗಣೇಶ್​​ರಿಂದ ಉಪವಾಸ ಸತ್ಯಾಗ್ರಹಕ್ಕೆ ಕುಳಿತುಕೊಂಡಿದ್ದಾರೆ. ಸತ್ಯಾಗ್ರಹ ನಿರತವಾಗಿರುವಾಗಲೇ ರಾಜಕುಮಾರ್ ಗಣೇಶ್​​​ ಅಸ್ವಸ್ಥರಾಗಿದ್ದಾರೆ. ನಸುಕಿನ ಜಾವದಿಂದಲೇ ರಾಜಕುಮಾರ್ ಏಕಾಂಗಿ ಹೋರಾಟ ಮಾಡುತ್ತಿದ್ದರು.​ ಈ ವೇಳೆ ನಿತ್ರಾಣಗೊಂಡು ಅಸ್ವಸ್ಥಗೊಂಡಿದ್ದಾರೆ. ಬಳಿಕ ಅವರನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.