ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಗಳು ಜಲಾವೃತ; ವಿಡಿಯೋ ನೋಡಿ

| Updated By: sandhya thejappa

Updated on: Oct 12, 2021 | 10:57 AM

ರಾತ್ರಿ ಸುರಿದ ಮಳೆಗೆ ಏರ್ಪೋರ್ಟ್ ಸುತ್ತಾಮುತ್ತ ಅವಾಂತರ ಸೃಷ್ಟಿಯಾಗಿತ್ತು. ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಗಳು ಮಳೆ ನೀರಿನಿಂದ ಜಲಾವೃತವಾಗಿತ್ತು.

ನಿನ್ನೆ (ಅ.11) ರಾತ್ರಿ ಬೆಂಗಳೂರು ಸೇರಿ ರಾಜ್ಯದ ಹಲವು ಕಡೆ ಭಾರಿ ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ವಿಮಾನ ನಿಲ್ದಾಣದ ಸುತ್ತಾಮುತ್ತ ಮಳೆ ನೀರು ನಿಂತು ಅವಾಂತರ ಸೃಷ್ಟಿಯಾಗಿತ್ತು. ವಾಹನ ಸವಾರರು ಪರದಾಡಿದ್ದರು. ರಾತ್ರಿ ಸುರಿದ ಮಳೆಗೆ ಏರ್ಪೋರ್ಟ್ ಸುತ್ತಾಮುತ್ತ ಅವಾಂತರ ಸೃಷ್ಟಿಯಾಗಿತ್ತು. ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಗಳು ಮಳೆ ನೀರಿನಿಂದ ಜಲಾವೃತವಾಗಿತ್ತು. ಸದ್ಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಹಜ ಸ್ಥಿತಿಗೆ ಮರಳಿದೆ. ರಸ್ತೆಯಲ್ಲಿ ನಿಂತಿದ್ದ ಭಾರಿ ಪ್ರಮಾಣದ ನೀರು ಕಡಿಮೆಯಾಗಿದೆ. ರಾತ್ರಿ ಏರ್ಪೋಟ್ ಸಿಬ್ಬಂದಿ ನೀರು ಹರಿದು ಹೋಗಲು ಕಾಲುವೆ ಮಾಡಿ ನೀರು ಖಾಲಿ ಮಾಡಿದ್ದಾರೆ. ಇದೀಗ ವಾಹನ ಸವಾರರು ಸರಾಗವಾಗಿ ಏರ್ಪೋರ್ಟ್​ಗೆ ತೆರಳಬಹುದು.