ಸಂಭಾವನೆ ಪಡೆಯದೇ ತುಳು ಸಿನಿಮಾದಲ್ಲಿ ನಟಿಸಿದ ಸುನೀಲ್ ಶೆಟ್ಟಿ
ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಜೈ’ ಸಿನಿಮಾ ಕನ್ನಡ ಹಾಗೂ ತುಳು ಭಾಷೆಯಲ್ಲಿ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ರೂಪೇಶ್ ಶೆಟ್ಟಿ ಜತೆ ರಾಜ್ ದೀಪಕ್ ಶೆಟ್ಟಿ ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅಭಿನಯಿಸಿದ್ದಾರೆ. ತುಳು ಚಿತ್ರ ಎಂಬ ಕಾರಣಕ್ಕೆ ಸುನೀಲ್ ಶೆಟ್ಟಿ ಸಂಭಾವನೆ ಪಡೆಯದೇ ನಟಿಸಿದರು.
ರೂಪೇಶ್ ಶೆಟ್ಟಿ (Roopesh Shetty) ಅವರು ನಟಿಸಿ, ನಿರ್ದೇಶನ ಮಾಡಿರುವ ‘ಜೈ’ ಸಿನಿಮಾ ಕನ್ನಡ ಮತ್ತು ತುಳು ಭಾಷೆಯಲ್ಲಿ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ರೂಪೇಶ್ ಶೆಟ್ಟಿ ಜೊತೆ ರಾಜ್ ದೀಪಕ್ ಶೆಟ್ಟಿ ಅವರು ನಟಿಸಿದ್ದಾರೆ. ಅಲ್ಲದೇ, ಅತಿಥಿ ಪಾತ್ರದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ಅವರು ಅಭಿನಯಿಸಿದ್ದಾರೆ. ತುಳು ಸಿನಿಮಾ ಎಂಬ ಕಾರಣಕ್ಕೆ ಸುನೀಲ್ ಶೆಟ್ಟಿ ಅವರು ಸಂಭಾವನೆ ಪಡೆಯದೇ ನಟಿಸಿದರು. ಹಾಗಾಗಿ ಅವರ ಎಂಟ್ರಿ ದೃಶ್ಯವನ್ನು ಬಹಳ ಅದ್ದೂರಿಯಾಗಿ ತೋರಿಸಬೇಕು ಎಂಬುದು ರೂಪೇಶ್ ಶೆಟ್ಟಿ ಅವರು ಪ್ಲ್ಯಾನ್ ಆಗಿತ್ತು. ಹಾಗಾಗಿ ಹೆಲಿಕಾಪ್ಟರ್ ಮೂಲಕ ಆ ದೃಶ್ಯವನ್ನು ಚಿತ್ರೀಕರಿಸಲಾಯಿತು. ಆ ಬಗ್ಗೆ ‘ಟಿವಿ9’ ಸಂದರ್ಶನದಲ್ಲಿ ರೂಪೇಶ್ ಶೆಟ್ಟಿ ಅವರು ಮಾತನಾಡಿದ್ದಾರೆ. ಆ ದೃಶ್ಯಕ್ಕೆ ಪ್ಲ್ಯಾನ್ ಆಗಿದ್ದು ಹೇಗೆ ಎಂಬುದನ್ನು ಅವರು ವಿವರಿಸಿದ್ದಾರೆ. ‘ಐದೇ ನಿಮಿಷದಲ್ಲಿ ಕಥೆ ಕೇಳಿ ಅವರು ಈ ಸಿನಿಮಾ ಮಾಡಲು ಒಪ್ಪಿಕೊಂಡರು. ಅವರ ಪರ್ಸನಲ್ ನಂಬರ್ ಕೊಟ್ಟರು. 5 ದಿನ ಶೂಟಿಂಗ್ ಮಾಡಿಕೊಟ್ಟರು. ಪ್ರಚಾರಕ್ಕೂ ಬಂದು ಸಹಾಯ ಮಾಡಿದರು’ ಎಂದಿದ್ದಾರೆ ರೂಪೇಶ್ ಶೆಟ್ಟಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
