ದಾವಣಗೆರೆ: ನಿಲ್ದಾಣಕ್ಕೆ ರೈಲು ಆಗಮಿಸುತ್ತಿದ್ದಂತೆ ಅದೇ ಹಳಿಯಲ್ಲಿ ಸಿಲುಕಿದ ವೃದ್ಧ, ಸಮಯಪ್ರಜ್ಞೆ ಮೆರೆದ ಆರ್ಪಿಎಫ್ ಸಿಬ್ಬಂದಿ
ರೈಲು ಬರುತ್ತಿದ್ದಾಗಲೇ ಹಳಿ ದಾಟಲು ಹೋಗಿ ಹಳಿಯಲ್ಲೇ ಸಿಲುಕಿದ ವೃದ್ಧನನ್ನು ಆರ್ಪಿಎಫ್ ಸಿಬ್ಬಂದಿ ರಕ್ಷಿಸಿದ ಘಟನೆ ದಾವರಣಗರೆ ರೈಲು ನಿಲ್ದಾಣದಲ್ಲಿ ನಡೆದಿದೆ. ಇದರ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದಾವಣಗೆರೆ: ರೈಲು ನಿಲ್ದಾಣದ ಪ್ಲಾಟ್ಫಾರ್ಮ್ಗೆ ವಾಸ್ಕೋ ರೈಲು ಆಗಮಿಸುತ್ತಿದ್ದಂತೆ ಹಳಿ ದಾಟಲು ಹೋಗಿ ಹಳಿಯಲ್ಲೇ ಸಿಲುಕಿಕೊಂಡ ವೃದ್ಧನನ್ನು ಆರ್ಪಿಎಫ್ (RPF) ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ. ರೈಲು ಬರುತ್ತಿರುವುದನ್ನು ಗಮನಿಸದೇ ನೇರವಾಗಿ ಪ್ಲಾಟ್ಫಾರ್ಮ್ನಿಂದ ಹಳಿಗೆ ಇಳಿದ ವೃದ್ಧ ರಂಗಪ್ಪ ಸಮೀಪ ಬಂದ ರೈಲು ನೋಡಿ ಭಯಗೊಂಡು ಮತ್ತೆ ಪ್ಲಾಟ್ಫಾರ್ಮ್ಗೆ ಏರಲು ಮುಂದಾಗಿದ್ದಾರೆ. ಅಷ್ಟರಲ್ಲಿ ನೆರವಗಿಗೆ ದಾವಿಸಿದ ಆರ್ಪಿಎಫ್ ಕಾನ್ಸ್ಟೇಬಲ್ ಶಿವಾನಂದ, ವೃದ್ಧನನ್ನು ಎಳೆದು ಹಳಿಯಿಂದ ಹೊರಕ್ಕೆ ಕೊಂಡೊಯ್ದಿದ್ದಾರೆ. ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಆರ್ಪಿಎಫ್ ಮತ್ತು ರೈಲ್ವೇ ಪೊಲೀಸರು ಶಿವಾನಂದ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ