ಚಿತ್ತಾಪುರ ಪಥಸಂಚಲನ ಸಂಘರ್ಷ ಕಲಬುರಗಿಯಿಂದ ಬೆಂಗಳೂರಿಗೆ ಶಿಫ್ಟ್, ಕೋರ್ಟ್ ಹೇಳಿದ್ದೇನು?
ಆರ್ಎಸ್ಎಸ್ (RSS) ಹಾಗೂ ಇತರೆ ಹಲವು ಸಂಘಟನೆಗಳು ಪಥಸಂಚಲನ ನಡೆಸಲು ಭಾರೀ ಪೈಪೋಟಿ ನಡೆಸಿದ್ದು, ಈ ಸಂಬಂಧ ಕಲಬುರಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿವೆ. ಆದ್ರೆ ಮತ್ತೊಂದೆಡೆ ಕೋರ್ಟ್ ಸೂಚಿಸಿದಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಅಶಾಂತಿ ಉಂಟಾಗಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಹೀಗಾಗಿ ಮತ್ತೊಂದು ಶಾಂತಿ ಸಭೆಗೆ ಕೋರ್ಟ್ ಸೂಚನೆ ನೀಡಿದ್ದು, ಅದು ಬೆಂಗಳೂರಿಗೆ ಶಿಫ್ಟ್ ಆಗಿದೆ.
ಕಲಬುರಗಿ, (ಅಕ್ಟೋಬರ್ 23): ಸಚಿವ ಪ್ರಿಯಾಂಕ್ ಖರ್ಗೆ (Priyank Kharge)ಅವರ ತವರು ಕ್ಷೇತ್ರ ಚಿತ್ತಾಪುರ (Chittapur) ಸದ್ಯ ರಾಜ್ಯಾಧ್ಯಂತ ಸುದ್ದಿಯಲ್ಲಿದೆ. ಆರ್ಎಸ್ಎಸ್ (RSS) ಹಾಗೂ ಇತರೆ ಹಲವು ಸಂಘಟನೆಗಳು ಪಥಸಂಚಲನ ನಡೆಸಲು ಭಾರೀ ಪೈಪೋಟಿ ನಡೆಸಿದ್ದು, ಈ ಸಂಬಂಧ ಕಲಬುರಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿವೆ. ಆದ್ರೆ ಮತ್ತೊಂದೆಡೆ ಕೋರ್ಟ್ ಸೂಚಿಸಿದಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಅಶಾಂತಿ ಉಂಟಾಗಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಹೀಗಾಗಿ ಮತ್ತೊಂದು ಶಾಂತಿ ಸಭೆಗೆ ಕೋರ್ಟ್ ಸೂಚನೆ ನೀಡಿದ್ದು, ಅದು ಬೆಂಗಳೂರಿಗೆ ಶಿಫ್ಟ್ ಆಗಿದೆ.
ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಅನುಮತಿ ಕೋರಿ ಆರ್ಎಸ್ಎಸ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ, ಇದೇ ನವೆಂಬರ್ 5ರಂದು ಬೆಂಗಳೂರಿನಲ್ಲಿ ಅಡ್ವೋಕೇಟ್ ಜನರಲ್ ಕಚೇರಿಯಲ್ಲೇ ಶಾಂತಿ ಸಭೆ ನಡೆಸಲು ಸೂಚಿಸಿ ಮುಂದಿನ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದೆ. ಹೀಗಾಗಿ ಕಲಬುರಗಿಯ ಪಥಸಂಚಲನ ಸಂಘರ್ಷ ಇದೀಗ ಬೆಂಗಳೂರಿಗೆ ಸ್ಥಳಾಂತರವಾಗಿದ್ದು, ಇನ್ನೊಂದೆಡೆ ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಮುಂದಾಗಿದ್ದ ಆರ್ಎಸ್ಎಸ್ಗೆ ನಿರಾಸೆಯಾಗಿದೆ.
