ಪುಟಿನ್ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ; ರಷ್ಯಾದಿಂದ ಮೊದಲ ವಿಡಿಯೋ ಬಿಡುಗಡೆ
ರಷ್ಯಾದ ನವ್ಗೊರೊಡ್ ಪ್ರದೇಶದಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಸಂಬಂಧಿಸಿದ ನಿವಾಸವನ್ನು ಗುರಿಯಾಗಿಸುವ ಸಂಘಟಿತ ಪ್ರಯತ್ನದ ಭಾಗವಾಗಿ ಉಕ್ರೇನ್ ಡ್ರೋನ್ ಅನ್ನು ಹಾರಿಸಿದೆ ಎಂದು ರಷ್ಯಾ ಹೇಳಿಕೊಂಡಿದೆ. ಆದರೆ ಕೈವ್ ಈ ಆರೋಪವನ್ನು ಬಲವಾಗಿ ನಿರಾಕರಿಸಿದೆ. ಇದನ್ನು ಕಟ್ಟುಕಥೆ ಎಂದು ಕರೆದಿದೆ. ಇದರ ನಡುವೆ ರಷ್ಯಾ ಉಕ್ರೇನ್ನ ಡ್ರೋನ್ ದಾಳಿಯ ದೃಶ್ಯಗಳನ್ನು ಬಿಡುಗಡೆ ಮಾಡಿದೆ.
ಮಾಸ್ಕೋ, ಡಿಸೆಂಬರ್ 31: ಉಕ್ರೇನ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿವಾಸವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿದೆ ಎಂದು ರಷ್ಯಾ (Russia) ಹೇಳಿಕೊಂಡಿದೆ. ಆದರೆ, ಉಕ್ರೇನ್ ಈ ಆರೋಪವನ್ನು ನಿರಾಕರಿಸಿದೆ. ಇದರ ನಡುವೆ ರಷ್ಯಾ ತಾನು ಪತನಗೊಳಿಸಿದ ಉಕ್ರೇನ್ನ ಡ್ರೋನ್ಗಳ ದೃಶ್ಯಾವಳಿಯನ್ನು ಬಿಡುಗಡೆ ಮಾಡಿದೆ. ನವ್ಗೊರೊಡ್ ಪ್ರದೇಶದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಸಂಬಂಧಿಸಿದ ನಿವಾಸವನ್ನು ಹೊಡೆಯಲು ಉಕ್ರೇನ್ ಪ್ರಯತ್ನ ಮಾಡಿತ್ತು ಎಂದು ಆರೋಪಿಸಿರುವ ರಷ್ಯಾ ತಾನು ಹೊಡೆದುರುಳಿಸಿದ ಡ್ರೋನ್‌ನ ರಾತ್ರಿಯ ದೃಶ್ಯಗಳನ್ನು ಬಿಡುಗಡೆ ಮಾಡಿದೆ. ಹಿಮದಿಂದ ಆವೃತವಾದ ಕಾಡಿನಲ್ಲಿ ಬಿದ್ದಿರುವ, ಹಾನಿಗೊಳಗಾದ ಉಕ್ರೇನ್ನ ಮಾನವರಹಿತ ವೈಮಾನಿಕ ವಾಹನವಿದು ಎಂದು ಮಾಸ್ಕೋ ಹೇಳಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

