S Janaki Passes Away: ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?

Updated on: Jul 12, 2026 | 12:09 PM

ಎಸ್. ಜಾನಕಿ ಅವರು ಆಂಧ್ರದಲ್ಲಿ ಜನಿಸಿದ್ದರೂ, ಮೈಸೂರಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ತಮ್ಮ ಜೀವನದ ಕೊನೆಯ ದಿನಗಳನ್ನು ಮೈಸೂರಿನಲ್ಲೇ ಕಳೆಯಬೇಕೆಂಬ ಅವರ ಅಚಲ ನಿರ್ಧಾರವಾಗಿತ್ತು. ಅವರ ಕೇರ್ ಟೇಕರ್ ನವೀನ್ ಈ ಕುರಿತು ಮಾತನಾಡುತ್ತಾ, ಜಾನಕಮ್ಮನವರ ಮಗ ಮೈಸೂರಿನಲ್ಲೇ ನಿಧನರಾದ ಬಳಿಕ, ಅವರು ಮೈಸೂರನ್ನು ಬಿಟ್ಟು ಹೋಗಲು ನಿರಾಕರಿಸಿದ್ದರು. ನಾನು ಮೈಸೂರಿನಲ್ಲೇ ಇರುತ್ತೇನೆ, ನಿಮ್ಮೊಂದಿಗೇ ಇರುತ್ತೇನೆ ಎಂದು ಹೇಳಿ ಕೈ ಹಿಡಿದಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಮೈಸೂರು, ಜುಲೈ 12: ಎಸ್. ಜಾನಕಿ ಅವರು ಆಂಧ್ರದಲ್ಲಿ ಜನಿಸಿದ್ದರೂ, ಮೈಸೂರಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ತಮ್ಮ ಜೀವನದ ಕೊನೆಯ ದಿನಗಳನ್ನು ಮೈಸೂರಿನಲ್ಲೇ ಕಳೆಯಬೇಕೆಂಬ ಅವರ ಅಚಲ ನಿರ್ಧಾರವಾಗಿತ್ತು. ಅವರ ಕೇರ್ ಟೇಕರ್ ನವೀನ್ ಈ ಕುರಿತು ಮಾತನಾಡುತ್ತಾ, ಜಾನಕಮ್ಮನವರ ಮಗ ಮೈಸೂರಿನಲ್ಲೇ ನಿಧನರಾದ ಬಳಿಕ, ಅವರು ಮೈಸೂರನ್ನು ಬಿಟ್ಟು ಹೋಗಲು ನಿರಾಕರಿಸಿದ್ದರು. ನಾನು ಮೈಸೂರಿನಲ್ಲೇ ಇರುತ್ತೇನೆ, ನಿಮ್ಮೊಂದಿಗೇ ಇರುತ್ತೇನೆ ಎಂದು ಹೇಳಿ ಕೈ ಹಿಡಿದಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಜಾನಕಮ್ಮ ಹೈದರಾಬಾದ್‌ನಲ್ಲಿ ಅರಮನೆಯಂತಹ ಮನೆಯನ್ನು ಹೊಂದಿದ್ದರೂ, ಮೈಸೂರಿನಲ್ಲಿ ನವೀನ್ ಅವರೊಂದಿಗೆ ಸರಳವಾಗಿ ಉಳಿಯಲು ಬಯಸಿದರು. ನನ್ನ ಕೊನೆಯ ಉಸಿರು ಮೈಸೂರಿನಲ್ಲೇ ಹೋಗಬೇಕು ಎಂದು ಅವರು ಆಗಾಗ ಹೇಳುತ್ತಿದ್ದರು. ತಾವು ಹಾಡಿದ ಹಾಡುಗಳನ್ನು ಕೇಳಿದಾಗ ಅಮ್ಮ ಬಹಳ ಖುಷಿಪಡುತ್ತಿದ್ದರು. ತಮ್ಮ ಸ್ಮರಣಶಕ್ತಿಯ ಬಗ್ಗೆಯೂ ಅವರಿಗೆ ಅಪಾರ ಹೆಮ್ಮೆಯಿತ್ತು. ಅನಾರೋಗ್ಯದ ನಡುವೆಯೂ ಹಳೆಯ ಕಲಾವಿದರ ಹೆಸರುಗಳನ್ನು ನಿಖರವಾಗಿ ಹೇಳುತ್ತಿದ್ದರು ಎಂದು ನವೀನ್ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us