ಸ್ಪಂದನ ಪಾರ್ಥೀವ ಶರೀರ ಇಂದು ಬೆಂಗಳೂರಿಗೆ: ಬಿಕೆ ಶಿವರಾಂ ಮನೆಗೆ ಆಗಮಿಸಿದ ಶ್ರೀಮುರಳಿ ಮತ್ತು ಎಸ್ ಎ ಚಿನ್ನೇಗೌಡ

|

Updated on: Aug 08, 2023 | 4:37 PM

ಬಿಕೆ ಹರಿಪ್ರಸಾದ್ ಹೇಳಿದ ಹಾಗೆ, ದೇಹವನ್ನು ಕೆಂಪೇಗೌಡ ವಿಮಾನ ನಿಲ್ದಾಣದಿಂದ ನೇರವಾಗಿ ಬಿಕೆ ಶಿವರಾಂ ಮನೆಗೆ ತರಲಾಗುವುದು. ಹಾಗಾಗೇ, ಎರಡೂ ಕುಟುಂಬಗಳ ಸದಸ್ಯರು ಶಿವರಾಂ ಮನೆಗೆ ಆಗಮಿಸುತ್ತಿದ್ದಾರೆ.

ಬೆಂಗಳೂರು: ಸ್ಪಂದನ ವಿಜಯರಾಘವೇಂದ್ರ (Spandana Vijay Raghvendra) ಅವರ ಪಾರ್ಥೀವ ಶರೀರ ಇಂದು ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಲಿದೆ. ಇಂದು ಬೆಳಗ್ಗೆ ಸ್ಪಂದನ ಚಿಕ್ಕಪ್ಪ ಬಿಕೆ ಹರಿಪ್ರಸಾದ್ (BK Hariprasad) ಹೇಳಿದ ಹಾಗೆ, ದೇಹವನ್ನು ಕೆಂಪೇಗೌಡ ವಿಮಾನ ನಿಲ್ದಾಣದಿಂದ ನೇರವಾಗಿ ಬಿಕೆ ಶಿವರಾಂ (BK Shivaram) ಮನೆಗೆ ತರಲಾಗುವುದು. ಹಾಗಾಗೇ, ಎರಡೂ ಕುಟುಂಬಗಳ ಸದಸ್ಯರು ಶಿವರಾಂ ಮನೆಗೆ ಆಗಮಿಸುತ್ತಿದ್ದಾರೆ. ವಿಜಯರಾಘವೇಂದ್ರ ಅವರ ಕಿರಿಯ ಸಹೋದರ ಶ್ರೀಮುರಳಿ (Srimurali) ಮನೆಯೊಳಗೆ ಹೋಗುತ್ತಿರುವುದನ್ನು ನೀವು ಗಮನಿಸಬಹುದು. ಅವರ ಹಿಂದೆ, ಸ್ಪಂದನ ಮಾವ ಅಂದರೆ ವಿಜಯ ರಾಘವೇಂದ್ರ ಮತ್ತು ಮುರಳಿ ತಂದೆ ಎಸ್ ಎ ಚಿನ್ನೇಗೌಡ (SA Chinne Gowda) ಕೂಡ ಅಲ್ಲಿಗೆ ಅಗಮಿಸಿದರು. ಸಂಬಂಧಿಕರು, ಆಪ್ತರು ಮತ್ತು ಸ್ನೇಹಿತರು ಈಗಾಗಲೇ ಅಲ್ಲಿ ನೆರೆದಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ