ಕಂಬಳ ಓಟವನ್ನು ಬೆರುಗಣ್ಣಿನಿಂದ ನೋಡಿದ ನಟಿ ಶಾನ್ವಿ

|

Updated on: Jan 12, 2025 | 1:51 PM

Saanvi Srivastava: ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ ಸುಂದರ, ಪ್ರತಿಭಾವಂತ ನಟಿ ಶಾನ್ವಿ ಶ್ರೀವಾಸ್ತವ್ ಮಂಗಳೂರಿನಲ್ಲಿ ನಡೆದ ಕಂಬಳ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಂಬಳ ಓಟವನ್ನು ಬೆರಗುಗಣ್ಣಿನಿಂದ ವೀಕ್ಷಿಸಿದ ಶಾನ್ವಿ ಶ್ರೀವಾಸ್ತವ್, ಮೊಬೈಲ್​ನಲ್ಲಿ ಸೆರೆ ಹಿಡಿದುಕೊಂಡರು. ಇಲ್ಲಿದೆ ನೋಡಿ ನಟಿಯ ವಿಡಿಯೋ....

ಮಂಗಳೂರು ಹೊರ ವಲಯದಲ್ಲಿ ನಡೆಯುತ್ತಿರುವ ನರಿಂಗಾನ ಕಂಬಳ ನಡೆಯುತ್ತಿದೆ. ಕಂಬಳಕ್ಕೆ ನಟಿ ಶಾನ್ವಿ ಶ್ರೀವಾಸ್ತವ್ ಅತಿಥಿಯಾಗಿ ಆಗಮಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಸಿಎಂ ಸಿದ್ದ ರಾಮಯ್ಯ ಅವರಿಗೆ ಬೆಳ್ಳಿ ನೊಗ, ಬೆಳ್ಳಿ ಹಿಡಿಕೆಯ ಕಂಬಳದ ಬೆತ್ತ ನೀಡಿ ಗೌರವ ಮಾಡಲಾಗುತ್ತಿದೆ. ಇಂದಿನ ಕಂಬಳಕ್ಕೆ ಕಾರ್ಯಕ್ರಮಕ್ಕೆ ಬಂದಿದ್ದ ನಟಿ ಶಾನ್ವಿ ಶ್ರೀವಾಸ್ತವ್, ಕಂಬಳದ ಓಟವನ್ನು ಬೆರಿನಿಂದ ವೀಕ್ಷಣೆ ಮಾಡಿದರು. ಮಾತ್ರವಲ್ಲದೆ ಕಂಬಳದ ಓಟವನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದುಕೊಂಡರು. ಈ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಕಂಬಳ ಉತ್ಸುವಕ್ಕೆ ಬಹುಭಾಷಾ ನಟಿ ಪೂಜಾ ಹೆಗ್ಡೆ ಆಗಮಿಸಿದ್ದರು. ರಿಷಬ್ ಶೆಟ್ಟಿ ಇನ್ನಿತರರು ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದನ್ನು ನೆನಪಿಸಿಕೊಳ್ಳಬಹುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ