ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?

Updated on: Jan 08, 2026 | 10:58 PM

ಜಲಂಧರ್​​ನ ಜನವಸತಿ ಪ್ರದೇಶಕ್ಕೆ ನುಗ್ಗಿದ ಜಿಂಕೆಯನ್ನು ಅರಣ್ಯ ಇಲಾಖೆಯಿಂದ ಬಹಳ ಕಷ್ಟಪಟ್ಟು ಹಿಡಿದು, ವಾಪಾಸ್ ಕಾಡಿಗೆ ಬಿಟ್ಟಿದ್ದಾರೆ. ಜಲಂಧರ್‌ನ ಆದಂಪುರ್‌ನ ಜನವಸತಿ ಪ್ರದೇಶಕ್ಕೆ ಜಿಂಕೆ ಇದ್ದಕ್ಕಿದ್ದಂತೆ ಬಂದಾಗ ಜನರು ಭಯಭೀತರಾದರು. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳ ಸಹಾಯದಿಂದ ಆ ಜಿಂಕೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಯಿತು.

ಜಲಂಧರ್, ಜನವರಿ 8: ಪಂಜಾಬ್​​ನ ಜಲಂಧರ್​​ನ ಜನವಸತಿ ಪ್ರದೇಶಕ್ಕೆ ನುಗ್ಗಿದ ಜಿಂಕೆಯನ್ನು ಅರಣ್ಯ ಇಲಾಖೆಯಿಂದ ಬಹಳ ಕಷ್ಟಪಟ್ಟು ಹಿಡಿದು, ವಾಪಾಸ್ ಕಾಡಿಗೆ ಬಿಟ್ಟಿದ್ದಾರೆ. ಜಲಂಧರ್‌ನ ಆದಂಪುರ್‌ನ ಜನವಸತಿ ಪ್ರದೇಶಕ್ಕೆ ಜಿಂಕೆ (Deer) ಇದ್ದಕ್ಕಿದ್ದಂತೆ ಬಂದಾಗ ಜನರು ಭಯಭೀತರಾದರು. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳ ಸಹಾಯದಿಂದ ಆ ಜಿಂಕೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಯಿತು.

ಈ ಘಟನೆ ಆದಂಪುರ ಬಳಿಯ ವಸತಿ ಪ್ರದೇಶದಲ್ಲಿ ನಡೆದಿದ್ದು, ರಸ್ತೆಯಲ್ಲಿ ಜಿಂಕೆ ಓಡುತ್ತಿರುವುದನ್ನು ಜನರು ನೋಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಆ ಜಿಂಕೆಯನ್ನು ಬೀದಿ ನಾಯಿಗಳು ಬೆನ್ನಟ್ಟುತ್ತಿದ್ದವು. ಇದರಿಂದಾಗಿ ಅದು ತುಂಬಾ ಭಯಭೀತವಾಗಿ ಕಂಡಲ್ಲೆಲ್ಲ ಓಡುತ್ತಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More