Samsung QLED TV: ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಸರಣಿಯಲ್ಲಿ ಮತ್ತೊಂದು ಲೇಟೆಸ್ಟ್​ ಮಾಡೆಲ್ ಬಿಡುಗಡೆ

|

Updated on: Jun 20, 2024 | 7:12 AM

55, 65 ಮತ್ತು 75 ಇಂಚಿನ ಪರದೆ ಹೊಂದಿರುವ ನೂತನ 2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿ ಕ್ವಾಂಟಮ್ ಡಾಟ್ ಮತ್ತು ಕ್ವಾಂಟಮ್ ಎಚ್‌ಡಿಆರ್‌ ತಂತ್ರಜ್ಞಾನದೊಂದಿಗೆ ದೇಶದಲ್ಲಿ ಬಿಡುಗಡೆಯಾಗಿದೆ. ನೂತನ ಸ್ಮಾರ್ಟ್ ಟಿವಿ ದರ ₹65,990ರಿಂದ ಆರಂಭವಾಗಲಿದೆ.

ಸ್ಮಾರ್ಟ್ ಗ್ಯಾಜೆಟ್​ ಮತ್ತು ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಹೆಸರು ಗಳಿಸಿರುವ ಸ್ಯಾಮ್​ಸಂಗ್ 2024 ಕ್ಯೂಎಲ್ಇಡಿ 4ಕೆ ಪ್ರೀಮಿಯಂ ಟಿವಿ ಸರಣಿಯಲ್ಲಿ ಹೊಸ ಮಾದರಿಗಳನ್ನು ಪರಿಚಯಿಸಿದೆ. 55, 65 ಮತ್ತು 75 ಇಂಚಿನ ಪರದೆ ಹೊಂದಿರುವ ನೂತನ 2024 ಕ್ಯೂಎಲ್ಇಡಿ 4ಕೆ ಟಿವಿ ಸರಣಿ ಕ್ವಾಂಟಮ್ ಡಾಟ್ ಮತ್ತು ಕ್ವಾಂಟಮ್ ಎಚ್‌ಡಿಆರ್‌ ತಂತ್ರಜ್ಞಾನದೊಂದಿಗೆ ದೇಶದಲ್ಲಿ ಬಿಡುಗಡೆಯಾಗಿದೆ. ನೂತನ ಸ್ಮಾರ್ಟ್ ಟಿವಿ ದರ ₹65,990ರಿಂದ ಆರಂಭವಾಗಲಿದೆ. ಸ್ಯಾಮ್​ಸಂಗ್ ಸ್ಟೋರ್, ಆನ್​ಲೈನ್ ಮತ್ತು ಪ್ರಮುಖ ಇ ಕಾಮರ್ಸ್ ಹಾಗೂ ರಿಟೇಲ್ ಮಳಿಗೆಗಳ ಮೂಲಕ ನೂತನ ಟಿವಿ ಲಭ್ಯವಾಗಲಿದೆ.