ಹೊಸ ರಿಯಾಲಿಟಿ ಶೋನಲ್ಲಿ ಸಂಯುಕ್ತಾ ಹೆಗಡೆಗೆ ಕಣ್ಣು ತಿನ್ನೋ ಟಾಸ್ಕ್; ನೋಡೋಕೆ ಗಟ್ಟಿ ಗುಂಡಿಗೆ ಬೇಕು
ಸಂಯುಕ್ತಾ ಹೆಗಡೆ ಅವರು ರಿಯಾಲಿಟಿ ಶೋಗಳ ಕಿಂಗ್. ಹಲವು ಶೋಗಳನ್ನು ಅವರು ಮಾಡಿ ಬಂದಿದ್ದಾರೆ. ಆದರೆ, ಈಗ ಮಾಡುತ್ತಿರುವ ರಿಯಾಲಿಟಿ ಶೋಗಳಷ್ಟು ಕಷ್ಟದ ಶೋನ ಅವರು ಮಾಡಿರಲಿಕ್ಕಿಲ್ಲ. ಅವರಿಗೆ ಕಣ್ಣುಗಳನ್ನು ಒಡೆದು ನೀರು ಕುಡಿಯೋ ಟಾಸ್ಕ್ ಸಿಕ್ಕಿದೆ. ಇದನ್ನು ನೋಡೋಕೆ ಗುಂಡಿಗೆ ಬೇಕು.
ಸಂಯುಕ್ತಾ ಹೆಗಡೆ ಅವರಿಗೆ ರಿಯಾಲಿಟಿ ಶೋಗಳು ಹೊಸದಲ್ಲ. ಈ ಮೊದಲು ಹಿಂದಿ ಯಾಲಿಟಿಶೋಗಳಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಅವರು ‘ಬಿಗ್ ಬಾಸ್’ಗೆ ಬಂದಿದ್ದರು. ಈಗ ಡಿಸ್ಕವರಿ ಚಾನೆಲ್ ಇಂಡಿಯಾದಲ್ಲಿ ಪ್ರಸಾರ ಆಗುವ ‘ರಿಯಾಲಿಟಿ ರಾಣಿಸ್ ಆಫ್ ಜಂಗಲ್’ನ ಎರಡನೇ ಸೀಸನ್ನಲ್ಲಿ ಸಂಯುಕ್ತಾ ಕಾಣಿಸಿಕೊಂಡಿದ್ದಾರೆ. ಇಲ್ಲಿ ‘ಐ ಬಕೆಟ್ ಚಾಲೆಂಜ್’ ನೀಡಲಾಗಿದೆ. ಅಂದರೆ, ಪ್ರಾಣಿ ಒಂದರ ಕಣ್ಣುಗಳನ್ನು ಇಡಲಾಗಿದೆ. ಅದನ್ನು ತಿನ್ನೋ ಚಾಲೆಂಜ್ ಇದು. ಕಣ್ಣುಗಳನ್ನು ತಿನ್ನಲು ಹೋಗಿ ಕೆಲವರು ವಾಂತಿ ಮಾಡಿಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ಮೇಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Sep 25, 2025 09:56 AM