ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಕಳ್ಳ ಎರಡು ಮನೆಗಳ ಎದುರಿನ ಸ್ಟ್ಯಾಂಡ್‌ನಿಂದ ಚಪ್ಪಲಿ ಕದಿಯಲು ಯತ್ನಿಸಿದ್ದಾನೆ. ಈ ಎಲ್ಲ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಆರಾಮಾಗಿ ಆತ ಕಳ್ಳತನ ಮಾಡುತ್ತಿರುವುದನ್ನು ನಾವು ಸಿಸಿಟಿವಿ ದೃಶ್ಯಗಳಲ್ಲಿ ನೋಡಬಹುದು. ಮನೆ ಮುಂದೆ ಚಪ್ಪಲಿ ಇಡಲು ಕೂಡ ಯೋಚಿಸಬೇಕಾದ ಪರಿಸ್ಥಿತಿ ಇದೆ.
ಹೈದರಾಬಾದ್ ನಗರದ ಪ್ರೇಮ್‌ನಗರ, ಅಂಬರ್‌ಪೇಟ್ ಪ್ರದೇಶದ ಅಪಾರ್ಟ್‌ಮೆಂಟ್‌ಗೆ ಕಳ್ಳನೊಬ್ಬ ನುಗ್ಗಿದ್ದಾನೆ. ಅಲ್ಲದೆ, ಕಳ್ಳರು ಮನೆಯ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಾರೆ ಎಂದು ನಾವು ಭಾವಿಸುತ್ತೇವೆ. ಆದರೆ ಈ ಕಳ್ಳ ಮಾಡಿದ್ದೇನು ಗೊತ್ತಾ? ಕಳ್ಳನು ಅಪಾರ್ಟ್‌ಮೆಂಟ್‌ನ ಮಹಡಿಯನ್ನು ಹತ್ತಿ ಮನೆ ಮುಂದೆ ಇಟ್ಟಿದ್ದ ಹೊಸ ಚಪ್ಪಲಿ ಮತ್ತು ಬೂಟುಗಳನ್ನು ತೆಗೆದುಕೊಂಡು ಹೋಗಿದ್ದಾನೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Oct 04, 2024 09:22 PM