Sanjjanaa Galrani: ಸಿಸೇರಿಯನ್ ಹೆರಿಗೆಯ ವಿಡಿಯೋ ಹಂಚಿಕೊಂಡ ನಟಿ ಸಂಜನಾ ಗಲ್ರಾನಿ

| Updated By: ಮದನ್​ ಕುಮಾರ್​

Updated on: Jul 08, 2022 | 9:21 AM

Caesarean Section: ಸಿಸೇರಿಯನ್ ಹೆರಿಗೆ ಮೂಲಕ ಮಗುವಿಗೆ ಜನ್ಮ ನೀಡಿದ ಸಂದರ್ಭ ಹೇಗಿತ್ತು ಎಂಬುದನ್ನು ಸಂಜನಾ ಗಲ್ರಾನಿ ವಿವರಿಸಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ.

ನಟಿ ಸಂಜನಾ ಗಲ್ರಾಣಿ (Sanjjanaa Galrani) ಅವರು ಚಿತ್ರರಂಗದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಸಂಸಾರದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಈ ವರ್ಷ ಮೇ ತಿಂಗಳಲ್ಲಿ ಅವರು ಮೊದಲ ಮಗುವಿಗೆ ಜನ್ಮ ನೀಡಿದರು. ಈಗ ಅವರು ತಮ್ಮ ಸಿಸೇರಿಯನ್​ ಹೆರಿಗೆಯ ವಿಡಿಯೋ (Viral Video) ಹಂಚಿಕೊಂಡಿದ್ದಾರೆ. ಇದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಸಿಸೇರಿಯನ್​ ಹೆರಿಗೆ (Caesarean Section) ಕಷ್ಟ ಹೇಗಿರುತ್ತದೆ ಎಂಬುದನ್ನು ಸಂಜನಾ ವಿವರಿಸಿದ್ದಾರೆ.

Published on: Jul 08, 2022 09:21 AM