Video: ಹಾಸ್ಟೆಲ್​ನಲ್ಲಿ ಅನ್ನದ ಪಾತ್ರೆಯೊಳಗೆ ಕಾಲಿಟ್ಟು ಮಲಗಿದ ಕಾವಲುಗಾರ

Updated on: Nov 14, 2025 | 12:40 PM

ಹಾಸ್ಟೆಲ್​ನಲ್ಲಿ ಅನ್ನದ ಪಾತ್ರೆಯೊಳಗೆ ವಾಚ್​ಮೆನ್ ಕಾಲಿಟ್ಟು ಮಲಗಿರುವ ವಿಡಿಯೋ ವೈರಲ್ ಆಗಿದೆ. ಸಂಗಾರೆಡ್ಡಿಯ ಇಸ್ಮಾಯಿಲ್‌ಖಾನ್‌ಪೇಟೆಯ ಹೊರವಲಯದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಾಸ್ಟೆಲ್‌ನ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಲಾದ ಅನ್ನದ ಪಾತ್ರೆಯೊಳಗೆ ಕಾವಲುಗಾರನೊಬ್ಬ ಕುಡಿದ ಮತ್ತಿನಲ್ಲಿ ತನ್ನ ಕಾಲನ್ನು ಇಳಿಬಿಟ್ಟುಕೊಂಡು ಮಲಗಿರುವ ವಿಡಿಯೋ ವೈರಲ್ ಆಗಿದೆ.

ಸಂಗಾರೆಡ್ಡಿ, ನವೆಂಬರ್ 14: ಹಾಸ್ಟೆಲ್​ನಲ್ಲಿ ಅನ್ನದ ಪಾತ್ರೆಯೊಳಗೆ ವಾಚ್​ಮೆನ್ ಕಾಲಿಟ್ಟು ಮಲಗಿರುವ ವಿಡಿಯೋ ವೈರಲ್ ಆಗಿದೆ. ಸಂಗಾರೆಡ್ಡಿಯ ಇಸ್ಮಾಯಿಲ್‌ಖಾನ್‌ಪೇಟೆಯ ಹೊರವಲಯದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಾಸ್ಟೆಲ್‌ನ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಲಾದ ಅನ್ನದ ಪಾತ್ರೆಯೊಳಗೆ ಕಾವಲುಗಾರನೊಬ್ಬ ಕುಡಿದ ಮತ್ತಿನಲ್ಲಿ ತನ್ನ ಕಾಲನ್ನು ಇಳಿಬಿಟ್ಟುಕೊಂಡು ಮಲಗಿರುವ ವಿಡಿಯೋ ವೈರಲ್ ಆಗಿದೆ.

ಬುಧವಾರ ರಾತ್ರಿ ವಿದ್ಯಾರ್ಥಿಗಳು ಹಾಸ್ಟೆಲ್ ಊಟದ ಹಾಲ್‌ಗೆ ಊಟಕ್ಕೆ ಹೋದಾಗ ಈ ಘಟನೆ ಸಂಭವಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಹಾಸ್ಟೆಲ್‌ನಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್, ಅನ್ನದ ಪಾತ್ರೆಯಲ್ಲಿ ಕಾಲು ಇಟ್ಟು ಕುಡಿದ ಮತ್ತಿನಲ್ಲಿ ನಿದ್ರಿಸಿರುವುದನ್ನು ಅವರು ಗಮನಿಸಿದರು. ಊಟದ ಸಮಯಕ್ಕೆ ಸರಿಯಾಗಿ ಈ ಘಟನೆ ನಡೆದಿದ್ದರಿಂದ, ವಿದ್ಯಾರ್ಥಿಗಳು ಗಾಬರಿಗೊಂಡು ತಕ್ಷಣ ಅಡುಗೆ ಗುತ್ತಿಗೆದಾರರಿಗೆ ಮಾಹಿತಿ ನೀಡಿದರು. ನಂತರ ಹೊಸದಾಗಿ ಊಟ ತಯಾರಿಸಿ ಬಡಿಸಲಾಗಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ