ಅಂದು ವಿನಯ್​ ಜತೆ ಜಗಳವಾಡಿ ಇಂದು ಲವ್​ ಎನ್ನುತ್ತಿರುವ ಸಂಗೀತಾ; ಶಾಕ್​ ಆದ ಕಾರ್ತಿಕ್​?

Updated on: Nov 14, 2023 | 7:50 AM

ದೀಪಾವಳಿ ಹಬ್ಬದ ಪ್ರಯುಕ್ತ ನೀಡಲಾಗಿದ್ದ ಟಾಸ್ಕ್​ ಸಮಯದಲ್ಲಿ ಅನೇಕ ಸತ್ಯಗಳು ಹೊರಬಿದ್ದಿವೆ. ಯಾರಿಗೆ ಯಾರ ಮೇಲೆ ಪ್ರೀತಿ ಇದೆ? ಯಾರಿಗೆ ಯಾರ ಮೇಲೆ ಕ್ರಶ್​ ಆಗಿದೆ ಎಂಬಿತ್ಯಾದಿ ವಿಚಾರಗಳನ್ನು ಬಿಗ್​ ಬಾಸ್​ ಸ್ಪರ್ಧಿಗಳು ಬಾಯಿ ಬಿಟ್ಟಿದ್ದಾರೆ. ಸಂಗೀತಾ ಶೃಂಗೇರಿ ಹೇಳಿದ ಮಾತು ಕೇಳಿ ಎಲ್ಲರಿಗೂ ಶಾಕ್​ ಆಗಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..

ದೊಡ್ಮನೆಯೊಳಗೆ ಕಾರ್ತಿಕ್ ಮಹೇಶ್​ ಮತ್ತು ಸಂಗೀತಾ ಶೃಂಗೇರಿ (Sangeetha Sringeri) ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ತಮ್ಮಿಬ್ಬರ ನಡುವೆ ಪ್ರೀತಿ ಇದೆ ಎಂದು ಕಾರ್ತಿಕ್​ ಭಾವಿಸಿದ್ದಾರೆ. ಆದರೆ ಸಂಗೀತಾ ಅವರು ಅದನ್ನು ಸ್ನೇಹ ಎಂದು ಆಗಾಗ ಸ್ಪಷ್ಟಪಡಿಸುತ್ತಲೇ ಇದ್ದಾರೆ. ಭಾನುವಾರ (ನ.13) ಬಿಗ್​ ಬಾಸ್​ ನೀಡಿದ್ದ ಟಾಸ್ಕ್​ನಲ್ಲಿ ಸಖತ್​ ಫನ್​ ತುಂಬಿತ್ತು. ಈ ವೇಳೆ ಸಂಗೀತಾ ಶೃಂಗೇರಿ ಅವರು ಹೊಸ ವಿಚಾರ ಬಹಿರಂಗ ಮಾಡಿದ್ದಾರೆ. ‘ಸಂಗೀತಾ ಮತ್ತು ವಿನಯ್​ ಅವರು ಈ ಮನೆಯಲ್ಲಿ ಯಾವಾಗಲೂ ಪ್ರೀತಿ ಮಾಡುತ್ತಾರೆ’ ಎಂದು ಸ್ವತಃ ಸಂಗೀತಾ ಹೇಳಿದರು. ಇದನ್ನು ಕೇಳಿ ಕಾರ್ತಿಕ್​ ಮಹೇಶ್​ ಅವರಿಗೆ ಶಾಕ್​ ಆಗಿದೆ. ಬಿಗ್​ ಬಾಸ್​ ಮನೆಯ ಇತರೆ ಸದಸ್ಯರು ಕೂಡ ಹೋ ಎಂದು ಕಿರುಚಿದ್ದಾರೆ. ಕೆಲವೇ ದಿನಗಳ ಹಿಂದೆ ಸಂಗೀತಾ ಹಾಗೂ ವಿನಯ್​ ಗೌಡ (Vinay Gowda) ಹಾವು-ಮುಂಗುಸಿ ರೀತಿ ಕಿತ್ತಾಡಿದ್ದರು. ಈಗ ಸಂಗೀತಾ ಪ್ರೀತಿ ಎಂದಿದ್ದು ಕೇಳಿ ಎಲ್ಲರಿಗೂ ಶಾಕ್​ ಆಗಿದೆ. ಈ ಮೋಜಿನ ಟಾಸ್ಕ್​ ಸಮಯದಲ್ಲಿ ಅನೇಕ ಸತ್ಯಗಳು ಹೊರಬಿದ್ದಿವೆ. ಯಾರಿಗೆ ಯಾರ ಮೇಲೆ ಪ್ರೀತಿ ಇದೆ? ಯಾರಿಗೆ ಯಾರ ಮೇಲೆ ಕ್ರಶ್​ ಆಗಿದೆ ಎಂಬಿತ್ಯಾದಿ ವಿಚಾರಗಳನ್ನು ಬಿಗ್​ ಬಾಸ್​ (Bigg Boss Kannada) ಸ್ಪರ್ಧಿಗಳು ಬಾಯಿ ಬಿಟ್ಟಿದ್ದಾರೆ. ಕಲರ್ಸ್​ ಕನ್ನಡದಲ್ಲಿ ಪ್ರತಿ ರಾತ್ರಿ 9.30ಕ್ಕೆ ಬಿಗ್ ಬಾಸ್​ ಸಂಚಿಕೆ ಬಿತ್ತರವಾಗುತ್ತದೆ. ಜಿಯೋ ಸಿನಿಮಾದಲ್ಲಿ ಲೈವ್ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 14, 2023 07:41 AM
Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More