ಜೈಲು ಎಂಥಹಾ ನರಕ, ಅಲ್ಲಿ ಏನೇನಿರುತ್ತೆ: ವಿವರಿಸಿದ ನಟಿ ಸಂಜನಾ ಗಲ್ರಾನಿ

|

Updated on: Aug 27, 2024 | 6:33 PM

ದರ್ಶನ್​ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸಿಕ್ಕಿರುವ ವಿಷಯ ಚರ್ಚೆಯಲ್ಲಿರುವಾಗಲೇ ನಟಿ ಸಂಜನಾ ಗಲ್ರಾನಿ ತಾವು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಅನುಭವಿಸಿದ ಕೆಟ್ಟ ಸಮಯವನ್ನು ನೆನಪು ಮಾಡಿಕೊಂಡಿದ್ದಾರೆ.

ನಟಿ ಸಂಜನಾ ಗಲ್ರಾನಿ ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಈಗ ಕೊಲೆ ಆರೋಪಿ ದರ್ಶನ್​ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ದೊರೆಯುತ್ತಿದೆ ಎಂಬ ವಿಷಯವಾಗಿ ಚರ್ಚೆ ಎದ್ದಿರುವ ಸಮಯದಲ್ಲಿ ನಟಿ ಸಂಜನಾ ಗಲ್ರಾನಿ ತಾವು ಜೈಲಿನಲ್ಲಿದ್ದಾಗ ಅಲ್ಲಿನ ಅನುಭವಗಳು ಹೇಗಿದ್ದವು ಎಂಬ ಬಗ್ಗೆ ಮಾತನಾಡಿದ್ದಾರೆ. ಜೈಲು ಎಂಬುದು ಎಂಥಹಾ ನರಕ ಎಂಬುದನ್ನು ತಮ್ಮ ಅನುಭವ ಆಧರಿಸಿ ವಿವರಿಸಿದ್ದಾರೆ. ಈಗ ದರ್ಶನ್​ಗೆ ಜೈಲಿನಲ್ಲಿ ಸಿಗರೇಟು, ವಿಶೇಷ ಕಪ್​ನಲ್ಲಿ ಕಾಫಿ ಎಲ್ಲ ಸಿಗುತ್ತಿದೆ. ಆದರೆ ತಾವಿದ್ದಾಗ ಒಂದು ಬಿಂದಿ, ಕಣ್ಣಿಗೆ ಹಾಕುವ ಕಾಟಿಕೆಯನ್ನು ಸಹ ಬಿಡದೆ ಕಿತ್ತುಕೊಂಡು ಹೋಗಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ. ‘ಸಾವು ಬಂದು ಬಿಡಲಿ ಆದರೆ ಜೈಲು ಮಾತ್ರ ಆಗಬಾರದು, ಅಂಥಹಾ ಕೆಟ್ಟ ಪರಿಸ್ಥಿತಿ ಅಲ್ಲಿರುತ್ತದೆ’ ಎಂದಿದ್ದಾರೆ ಸಂಜನಾ ಗಲ್ರಾನಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ