ಸಂಸದ ಸಿಎನ್ ಮಂಜುನಾಥ್​ರ ಮೊದಲ ಸಭೆಯಲ್ಲಿ ಚೆಸ್ ಆಡುತ್ತಾ ಕುಳಿತನೊಬ್ಬ ಅಧಿಕಾರಿ!

ಸಂಸದ ಸಿಎನ್ ಮಂಜುನಾಥ್​ರ ಮೊದಲ ಸಭೆಯಲ್ಲಿ ಚೆಸ್ ಆಡುತ್ತಾ ಕುಳಿತನೊಬ್ಬ ಅಧಿಕಾರಿ!

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 27, 2024 | 7:35 PM

ದಿಶಾ ಮತ್ತು ಕೆಡಿಪಿ ಸಭೆಗಳಿಗೆ ಅಧಿಕಾರಿಗಳು ತಡವಾಗಿ ಬರೋದು, ಸಮಯಕ್ಕೆ ಸರಿಯಾಗಿ ಬಂದರೂ ತಮ್ಮ ಮೊಬೈಲ್ ಫೋನ್ ಗಳಲ್ಲಿ ಗೇಮ್​ ಗಳನ್ನಾಡುವ, ಚಾಟಿಂಗ್ ಮಾಡುತ್ತ ಕಾಲಹರಣ ಮಾಡುವ ದೃಶ್ಯಗಳು ಪದೇಪದೆ ವರದಿಯಾಗುತ್ತಿವೆ. ಇದನ್ನು ಮಾಡುವ ಬದಲು ಅಧಿಕಾರಿಗಳು ಮನೇಲಿರೋದೇ ಲೇಸು!

ರಾಮನಗರ: ಬೆಂಗಳೂರು ಗ್ರಾಮಾಂತರ ಸಂಸದ ಡಾ ಸಿಎನ್ ಮಂಜುನಾಥ ಅವರು ಇಂದು ರಾಮನಗರದಲ್ಲಿ ನಡೆಸಿದ ದಿಶಾ ಸಭೆಯಲ್ಲಿ ಅಧಿಕಾರಿಯೊಬ್ಬ ಸಂಸದ ಹೇಳುವುದನ್ನು ಕೇಳಿಸಿಕೊಳ್ಳದೆ ತನ್ನ ಮೊಬೈಲ್ ಫೋನಲ್ಲಿ ಚೆಸ್ ಆಡುವುದರಲ್ಲಿ ಮಗ್ನರಾಗಿದ್ದರು! ಮಂಜುನಾಥ ಅವರು ಲೋಕಸಭೆಗೆ ಆಯ್ಕೆಯಾದ ಬಳಿಕ ನಡೆಸಿದ ಮೊದಲ ಸಭೆ ಇದು. ಸಭೆಯಲ್ಲಿ ಆಫೀಸರ್ ಗಳು ಯಾಪಾಟಿ ಗಂಭೀರರಾಗಿರುತ್ತಾರೆ ಅನ್ನೋದು ಮಂಜುನಾಥ್ ಅವರಿಗೆ ಗೊತ್ತಾಗಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೆಡಿಪಿ ಸಭೆಗೆ ತಡವಾಗಿ ಬಂದ ಅಧಿಕಾರಿ ಮೇಲೆ ಶಾಲೆಯ ಮುಖ್ಯೋಪಾಧ್ಯಾಯನ ಹಾಗೆ ರೇಗಿದ ಪರಮೇಶ್ವರ್