ಬಿಗ್​ಬಾಸ್ ಮನೆಗೆ ಬಂದ ಕಾಂತಾರ ಬೆಡಗಿ ಸಪ್ತಮಿ ಗೌಡ, ಕಾರಣವೇನು?

Updated on: Dec 30, 2023 | 10:04 PM

Sapthami Gowda: ಬಿಗ್​ಬಾಸ್ ಮನೆಗೆ ‘ಕಾಂತಾರ’ ಬೆಡಗಿ ಸಪ್ತಮಿ ಗೌಡ ಆಗಮಿಸಿದ್ದಾರೆ. ಪ್ರಮುಖವಾದ ವಿಷಯವೊಂದರ ಪ್ರಚಾರಕ್ಕಾಗಿ ಅವರು ಬಿಗ್​ಬಾಸ್ ಮನೆಯನ್ನು ವೇದಿಕೆಯನ್ನಾಗಿ ಬಳಸಿಕೊಂಡಿದ್ದಾರೆ.

ಕಾಂತಾರ’ (Kantara) ಬೆಡಗಿ ಸಪ್ತಮಿ ಗೌಡ (Sapthami Gowda) ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಇದರ ನಡುವೆ ಹಠಾತ್ತನೆ ಅವರು ಬಿಗ್​ಬಾಸ್ ಮನೆ ಪ್ರವೇಶಿಸಿದ್ದಾರೆ. ಅದೂ ಸಹ ಬಹಳ ಮುಖ್ಯವಾದ ಕಾರಣವೊಂದಕ್ಕಾಗಿ ಅವರು ಮನೆಗೆ ಬಂದಿದ್ದರು. ‘ಶುಚಿ: ನನ್ನ ಮೈತ್ರಿ ಮುಟ್ಟಿನ ಕಪ್’ ಅಭಿಯಾನದ ರಾಯಭಾರಿ ಆಗಿರುವ ಸಪ್ತಮಿ ಗೌಡ ಅವರು ಮುಟ್ಟಿನ ಕಪ್ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬಿಗ್​ಬಾಸ್ ಮನೆಗೆ ಆಗಮಿಸಿದ್ದರು. ಋತುಸ್ರಾವದ ಸಮಯದಲ್ಲಿ ಪ್ಯಾಡ್ ಬದಲಿಗೆ ಕಪ್ ಬಳಕೆ ಮಾಡುವುದು ಹೆಚ್ಚು ಶುಚಿದಾಯಕ ಎಂಬುದರ ಜೊತೆಗೆ ಕಪ್ ಬಳಕೆಯಿಂದ ಆಗಬಹುದಾದ ಇನ್ನಷ್ಟು ಲಾಭಗಳ ಬಗ್ಗೆ ಮನದಟ್ಟು ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 30, 2023 08:01 PM
Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More