ಹುಬ್ಬಳ್ಳಿಯಲ್ಲಿ ಚಂದ್ರಶೇಖರ್ ಗುರೂಜಿ ಮರ್ಡರ್; ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಕೊಲೆ ದೃಶ್ಯ ಇಲ್ಲಿದೆ

Edited By:

Updated on: Jul 05, 2022 | 3:46 PM

Dr. Chandrashekhar Guruji Murder: ಉಣಕಲ್​ನ ಕೆರೆ ಬಳಿ ಇರುವ ಪ್ರೆಸಿಡೆಂಟ್ ಹೋಟೆಲ್​ನಲ್ಲಿ ಮಧ್ಯಾಹ್ನ 12.23ಕ್ಕೆ ಈ ಘಟನೆ ನಡೆದಿದೆ. ಚಾಕು ಇರಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹುಬ್ಬಳ್ಳಿಯಲ್ಲಿ ಇಂದು ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯ (Chandrashekhar Guruji )ಬರ್ಬರ ಕೊಲೆಯಾಗಿದೆ. ಸ್ವಾಮೀಜಿ ಕಾಲಿಗೆ ಬೀಳುವ ನೆಪದಲ್ಲಿ ಬಂದು ದುರುಳರು ಚಾಕು ಇರಿದು ಹತ್ಯೆ ಮಾಡಿದ್ದಾರೆ. ಆರೋಪಿಗಳು ಭೇಟಿಯಾಗಲು ಕರೆಸಿಕೊಂಡು ಗುರೂಜಿ ಹತ್ಯೆಗೈದಿದ್ದಾರೆ. ಓರ್ವ ಕಾಲಿಗೆ ಬೀಳುತ್ತಾನೆ. ಮತ್ತೋರ್ವ ಗುರೂಜಿಗೆ ಚಾಕು ಇರಿದಿದ್ದಾರೆ. ದುಷ್ಕರ್ಮಿಗಳು ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾರೆ. 60ಕ್ಕೂ ಹೆಚ್ಚು ಬಾರಿ ಚಾಕು ಇರಿದಿದ್ದಾರೆ. ಉಣಕಲ್​ನ ಕೆರೆ ಬಳಿ ಇರುವ ಪ್ರೆಸಿಡೆಂಟ್ ಹೋಟೆಲ್​ನಲ್ಲಿ ಮಧ್ಯಾಹ್ನ 12.23ಕ್ಕೆ ಈ ಘಟನೆ ನಡೆದಿದೆ. ಚಾಕು ಇರಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Published on: Jul 05, 2022 02:12 PM
Loading...
Unable to load recommendations.
Follow Us
TV9 Web

TV9 Kannada

Read More