ಸರ್ಪ ಶಾಪ ಅಂದರೆ ಏನು? ಇದರಿಂದ ಮುಕ್ತಿ ಸಿಗಲು ಏನು ಮಾಡಬೇಕು ನೋಡಿ

Updated on: Sep 09, 2025 | 6:50 AM

ಸರ್ಪ ಶಾಪವು ವಂಶಪಾರಂಪರ್ಯವಾಗಿ ಬರುವ ಶಾಪವಾಗಿದ್ದು, ಅದರಿಂದ ಸಂತಾನ ಸಮಸ್ಯೆಗಳು, ಮಾನಸಿಕ ಯಾತನೆ ಮತ್ತು ಕುಟುಂಬದಲ್ಲಿ ಅಶಾಂತಿ ಉಂಟಾಗಬಹುದು. ನವಗ್ರಹ ಪ್ರತಿಷ್ಠಾಪನೆ, ಶಿವನ ಅಭಿಷೇಕ ಮತ್ತು ಅಂಗವಿಕಲರಿಗೆ ಸಹಾಯ ಮಾಡುವುದು ಇತ್ಯಾದಿ ಪರಿಹಾರಗಳನ್ನು ಈ ವಿಡಿಯೋದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ವಿಡಿಯೋ ಇಲ್ಲಿದೆ.

ಸರ್ಪ ಶಾಪ ಎಂದರೇನು ಮತ್ತು ಅದರಿಂದ ಹೇಗೆ ಮುಕ್ತಿ ಪಡೆಯಬಹುದು ಎಂಬುದರ ಕುರಿತು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ಮಾಹಿತಿ ನೀಡಿದ್ದಾರೆ. ಸರ್ಪ ಶಾಪ ಮತ್ತು ಸರ್ಪ ದೋಷದ ನಡುವೆ ವ್ಯತ್ಯಾಸವಿದೆ ಎಂದು ಅವರು ಹೇಳಿದ್ದು, ಸರ್ಪ ಶಾಪ ವಂಶಪಾರಂಪರ್ಯವಾಗಿ ಬರುವ ಒಂದು ಅಗೋಚರ ಶಾಪವಾಗಿದೆ ಎಂದಿದ್ದಾರೆ. ಜಾತಕದಲ್ಲಿ ಲಗ್ನದಿಂದ ನವಮದಲ್ಲಿ ರಾಹು ಮತ್ತು ಮಂಗಳನ ದೃಷ್ಟಿ ಇರುವುದು ಸರ್ಪ ಶಾಪದ ಸೂಚನೆಯಾಗಿದೆ. ಈ ಶಾಪದಿಂದ ಸಂತಾನ ಸಮಸ್ಯೆಗಳು, ಮಾನಸಿಕ ಯಾತನೆ ಮತ್ತು ಕುಟುಂಬದಲ್ಲಿ ಅಶಾಂತಿ ಉಂಟಾಗಬಹುದು. ಪರಿಹಾರವಾಗಿ ನವಗ್ರಹ ಪ್ರತಿಷ್ಠಾಪನೆ, ಶಿವನಿಗೆ 108 ದಿನಗಳ ಅಭಿಷೇಕ, ನಾಗ ಪ್ರತಿಷ್ಠೆ, ಅಥವಾ ಅಂಗವಿಕಲರಿಗೆ ಸಹಾಯ ಮಾಡುವುದನ್ನು ಸೂಚಿಸಲಾಗಿದೆ. ಇವುಗಳ ಜೊತೆಗೆ, ಅನಾಥರಿಗೆ ಸೇವೆ ಸಲ್ಲಿಸುವುದರಿಂದಲೂ ಪರಿಹಾರ ಸಿಗಬಹುದು. ಎಲ್ಲವೂ ನಂಬಿಕೆಯ ಮೇಲೆ ಅವಲಂಬಿತವಾಗಿದೆ ಎಂದು ಗುರೂಜಿ ಹೇಳಿದ್ದಾರೆ.