Assembly Polls | ರಾಜ್ಯದ ಪ್ರತಿಯೊಂದು ಮನೆಗೆ ನಮ್ಮ ಸರ್ಕಾರ ಸೌಲಭ್ಯಗಳನ್ನು ತಲುಪಿಸಿದೆ: ಬಿಎಸ್ ಯಡಿಯೂರಪ್ಪ
ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡಿದೆ, ಪ್ರತಿಯೊಂದು ಮನೆಗೆ ಸರ್ಕಾರದ ಸೌಲಭ್ಯ ಮತ್ತು ಕಾರ್ಯಕ್ರಮಗಳನ್ನು ತಲುಪಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರವು (BJP Government) ಜನರಿಗೆ ಎಲ್ಲ ಸೌಲಭ್ಯಗಳು ಒದಗಿಸಿದೆ, ಹಾಗಾಗಿ, ತಮ್ಮ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವುದನ್ನು ಯಾರೂ ತಡೆಯರು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಹೇಳಿದರು. ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾದ ಬಿಜೆಪಿ ಕಾರ್ಯಕಾರಿಣಿ ಸಮಿತಿ (BJP executive committee) ಸಭೆಯಲ್ಲಿ ಮಾತಾಡಿದ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನಾಯಕತ್ವಕ್ಕೆ ವಿಶ್ವವೇ ತಲೆಬಾಗಿದೆ, ಅವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡಿದೆ, ರಾಜ್ಯದ ಪ್ರತಿಯೊಂದು ಮನೆಗೆ ಸರ್ಕಾರದ ಸೌಲಭ್ಯ ಮತ್ತು ಕಾರ್ಯಕ್ರಮಗಳನ್ನು ತಲುಪಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ