KGF Babu Vs RV Devraj: ದೇವರಾಜ್ ಪುತ್ರ ಯುವರಾಜ್ನಿಂದ ಕೊಲೆ ಬೆದರಿಕೆ ಆರೋಪಿಸಿ ಪೊಲೀಸರಿಗೆ ದೂರು ಸಲ್ಲಿಸಿದ ಬಾಬು
ದೇವರಾಜ್ ಅವರ ಮಗ ಯುವರಾಜ್ ತನ್ನ ಬೆಂಬಲಿಗರೊಂದಿಗೆ ಸೇರಿ ತನ್ನನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಅವನ ಮತ್ತು ಅವನ ಸಂಗಡಿಗರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದೇನೆ ಎಂದು ಬಾಬು ಹೇಳಿದರು.
ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ಮತ್ತು ಪ್ರಮುಖ ನಾಯಕರ ನಡುವಿನ ಜಗಳ, ಮುನಿಸು ಮತ್ತು ಕೋಪ-ತಾಪಗಳು ಒಂದೆಡೆಯಾದರೆ ಎರಡನೇ ಹಂತದ ನಾಯಕರು ಕೂಡ ನಾವೇನು ಕಮ್ಮಿಯಿಲ್ಲ ಅನ್ನುವಂತಿದೆ ಮಾರಾಯ್ರೇ. ಕೆಜಿಎಫ್ ಬಾಬು (KGF Babu) ಮತ್ತು ಆರ್ ವಿ ದೇವರಾಜ್ (RV Devaraj) ನಡುವಿನ ವೈಷಮ್ಯಕ್ಕೆ ಬಹಳ ದಿನಗಳ ಇತಿಹಾಸವಿದೆ. ನಗರದಲ್ಲಿ ಇಂದು ಮಾಧ್ಯಮದವರೊಡನೆ ಮಾತಾಡಿದ ಬಾಬು, ದೇವರಾಜ್ ಅವರ ಮಗ ಯುವರಾಜ್ ತನ್ನ ಬೆಂಬಲಿಗರೊಂದಿಗೆ ಸೇರಿ ತನ್ನನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಅವನ ಮತ್ತು ಅವನ ಸಂಗಡಿಗರ ವಿರುದ್ಧ ಪೊಲೀಸರಿಗೆ ದೂರು (complaint) ಸಲ್ಲಿಸಿದ್ದೇನೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 04, 2023 01:35 PM
Latest Videos