Satish Jarkiholi: ಸರ್ವರ್ ಹ್ಯಾಕ್ ಅಂತ ಸುಳ್ಳು ಆರೋಪ ಮಾಡಿದ್ದ ಸಚಿವ ಸತೀಶ್ ಜಾರಕಿಹೊಳಿ ತಪ್ಪನ್ನು ಸಮರ್ಥಿಸಿಕೊಂಡ ಬಗೆ ಆಘಾತಕಾರಿ!

ಅರುಣ್​ ಕುಮಾರ್​ ಬೆಳ್ಳಿ

Updated on: Jun 21, 2023 | 4:30 PM

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟ ಸಚಿವರಿಗೆ ಗಂಭೀರ ಮತ್ತು ತೂಕದ ಮಾತಿಗಳನ್ನಾಡುವಂತೆ ಹೇಳುವ ಸಮಯ ಬಂದಿದೆ.

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿರುವ ಹುಕ್ಕೇರಿ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi), ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ (server hack) ಮಾಡಿದೆ ಅಂತ ಹೇಳಿದ್ದು ಸುಳ್ಳು ಆರೋಪ ಅನ್ನೋದನ್ನು ಒಪ್ಪಿಕೊಳ್ಳಲು ತಮ್ಮದೇ ಆದ ವಿಧಾನ ಬಳಸಿದರು. ತಾನು ಹೇಳಿದ್ದು ರಾಜಕೀಯ ಹಿನ್ನೆಲೆ ಹೇಳಿಕೆ ಎಂದ ಸಚಿವ ಅದನ್ನು ಸಮರ್ಥಸಿಕೊಂಡಿದ್ದು ಅವರ ರಾಜಕೀಯದಲ್ಲಿನ ಅನುಭವಕ್ಕೆ (political experience) ಅಪವಾದವೆನಿಸಿತು. ಇಂಥ ಹೇಳಿಕೆಗಳನ್ನು ಬಿಜೆಪಿ ನಾಯಕರು ಹಲವಾರು ಬಾರಿ ನೀಡಿದ್ದಾರೆ, ಅವುಗಳಿಗೆಲ್ಲ ಅವರು ಉತ್ತರ ನೀಡುತ್ತಾರೆಯೇ? ತನ್ನಲ್ಲಿ ಒಂದು ದೊಡ್ಡ ಲಿಸ್ಟ್ ಇದೆ, ಉತ್ತರ ಕೊಡಲಿ ನೋಡೋಣ ಎಂದು ಜಾರಕಿಹೊಳಿ ಹೇಳಿದರು. ಎಂಥ ಸಮರ್ಥನೆ ಎಂಥ ಸಮಜಾಯಿಷಿ ನೋಡಿ! ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟ ಸಚಿವರಿಗೆ ಗಂಭೀರ ಮತ್ತು ತೂಕದ ಮಾತಿಗಳನ್ನಾಡುವಂತೆ ಹೇಳುವ ಸಮಯ ಬಂದಿದೆ ಮಾರಾಯ್ರೇ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.