ರಮೇಶ್​ ಜಾರಕಿಹೊಳಿ ಬೆಳವಣಿಗೆ ಸಹಿಸಲಾಗದೆ ಬಿಜೆಪಿಯವರೇ ಬ್ರೇಕ್​ ಹಾಕಿರಬಹುದು: ಸತೀಶ್​ ಜಾರಕಿಹೊಳಿ

ರಮೇಶ್​ ಜಾರಕಿಹೊಳಿಯವರ ಸೋದರ ಸತೀಶ್​ ಜಾರಕಿಹೊಳಿ ಟಿವಿ 9 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇಂಥ ಪ್ರಕರಣಗಳು ಆದಾಗ ರಾಜೀನಾಮೆ ಕೊಡಲೇಬೇಕಾಗುತ್ತದೆ ಎಂದೂ ಹೇಳಿದ್ದಾರೆ.

Lakshmi Hegde

|

Mar 04, 2021 | 10:59 AM

ರಮೇಶ್ ಜಾರಕಿಹೊಳಿಯವರ ಸಿಡಿ ಬಹಿರಂಗವಾಗುತ್ತಿದ್ದಂತೆ ಅವರ ಸೋದರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಗೋಕಾಕ್​​ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ರಮೇಶ್​ ವೇಗವಾಗಿ ರಾಜಕೀಯದಲ್ಲಿ ಬೆಳೆಯುತ್ತಿರುವುದನ್ನು ನೋಡಿ, ಬಿಜೆಪಿ ಪಕ್ಷದವರೇ ಅವರ ವೇಗಕ್ಕೆ ಕಡಿವಾಣ ಹಾಕಲು ಮುಂದಾಗಿಬಹುದು. ಇನ್ನು ಸಿಡಿ ವಿಚಾರಕ್ಕೆ ಬಂದರೆ ಇದೇ ಮೊದಲಲ್ಲ. ಬಿಜೆಪಿ, ಕಾಂಗ್ರೆಸ್​ ಸೇರಿ ಹಲವು ಪ್ರಾದೇಶಿಕ ಪಕ್ಷಗಳಲ್ಲಿ ಈ ಹಿಂದೆ ಸಾಕಷ್ಟು ನಡೆದಿವೆ ಎಂದಿದ್ದಾರೆ. ರಮೇಶ್​ ಜಾರಕಿಹೊಳಿಯವರಿಗೆ ಕುಟುಂಬದವರೇ ಸಾಕಷ್ಟು ಎಚ್ಚರಿಸಿದ್ದರು. ಆದರೆ ರಮೇಶ್​ ಎಲ್ಲರನ್ನೂ ನಂಬಿ ಕೆಟ್ಟರು ಎಂದೂ ಹೇಳಿದರು.

Follow us on

Click on your DTH Provider to Add TV9 Kannada