‘ಮ್ಯಾಟ್ನಿ’ ಸಿನಿಮಾ ಹಾಡಿನ ಶೂಟಿಂಗ್​ನಲ್ಲಿ ಭರ್ಜರಿ ಸ್ಟೆಪ್ ಹಾಕಿದ ನೀನಾಸಂ ಸತೀಶ್; ಹೇಗಿದೆ ನೋಡಿ ಸಾಂಗ್ ಶೂಟ್

Updated on: Sep 11, 2023 | 9:15 AM

‘ಮ್ಯಾಟ್ನಿ’ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಚಿತ್ರದ ಎಣ್ಣೆ ಸಾಂಗ್ ಶೂಟಿಂಗ್ ಭರದಿಂದ ಸಾಗುತ್ತಿದೆ. ಹೆಚ್ಚು ಜಾಗೃತಿ ವಹಿಸಿ ಶೂಟ್ ಮಾಡಲಾಗುತ್ತಿದೆ. ಸಾಂಗ್ ಶೂಟಿಂಗ್​ನಲ್ಲಿ ನೀನಾಸಂ ಸತೀಶ್, ಶಿವರಾಜ್ ಕೆ.ಆರ್​ಪೇಟೆ, ನಾಗಭೂಷಣ್ ಮೊದಲಾದವರು ಭಾಗಿ ಆಗಿದ್ದಾರೆ

ಸತೀಶ್ ಹಾಗೂ ರಚಿತಾ ರಾಮ್ ಅವರದ್ದು ಹಿಟ್ ಕಾಂಬಿನೇಷನ್. ‘ಅಯೋಗ್ಯ’ ಸಿನಿಮಾದ ‘ಯೇನಮ್ಮಿ ಯೇನಮ್ಮಿ..’ ಹಾಡು ಸೂಪರ್ ಹಿಟ್ ಆಯಿತು. ಈಗ ಈ ಜೋಡಿ ‘ಮ್ಯಾಟ್ನಿ’ ಸಿನಿಮಾಗಾಗಿ (Matinee Movie) ಒಂದಾಗಿದೆ. ಈ ಕಾರಣದಿಂದಲೇ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಚಿತ್ರದ ಎಣ್ಣೆ ಸಾಂಗ್ ಶೂಟಿಂಗ್ ಭರದಿಂದ ಸಾಗುತ್ತಿದೆ. ಹೆಚ್ಚು ಜಾಗೃತಿ ವಹಿಸಿ ಶೂಟ್ ಮಾಡಲಾಗುತ್ತಿದೆ. ಸಾಂಗ್ ಶೂಟಿಂಗ್​ನಲ್ಲಿ ನೀನಾಸಂ ಸತೀಶ್, ಶಿವರಾಜ್ ಕೆ.ಆರ್​ಪೇಟೆ, ನಾಗಭೂಷಣ್ ಮೊದಲಾದವರು ಭಾಗಿ ಆಗಿದ್ದಾರೆ. ಆ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More