AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರು ಗುದ್ದಿದ್ದಕ್ಕೆ ಪೌರಕಾರ್ಮಿಕನ ಕ್ಷಮೆ ಕೇಳಿದ ರಚಿತಾ ರಾಮ್​; ಇಲ್ಲಿದೆ ವಿಡಿಯೋ

‘ಆಕಸ್ಮಿಕವಾಗಿ ಆ ಘಟನೆ ನಡೆಯಿತು. ಉದ್ದೇಶಪೂರ್ವಕವಾಗಿ ಮಾಡಿದ ತಪ್ಪು ಅಲ್ಲ. ಮನಸಾರೆ ನಾನು ಕ್ಷಮೆ ಕೇಳುತ್ತೇನೆ. ನಿನ್ನೆಯ ಘಟನೆಯಿಂದ ಕಾರ್ಮಿಕರಿಗೆ ಬೇಸರ ಆಗಿದ್ದರೆ ದಯವಿಟ್ಟು ಕ್ಷಮಿಸಿ. ಇಂಥ ಘಟನೆ ಮತ್ತೊಮ್ಮೆ ಆಗದ ರೀತಿಯಲ್ಲಿ ನಾನು ನೋಡಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ ನಟಿ ರಚಿತಾ ರಾಮ್​.

ಕಾರು ಗುದ್ದಿದ್ದಕ್ಕೆ ಪೌರಕಾರ್ಮಿಕನ ಕ್ಷಮೆ ಕೇಳಿದ ರಚಿತಾ ರಾಮ್​; ಇಲ್ಲಿದೆ ವಿಡಿಯೋ
ರಂಗಪ್ಪ, ರಚಿತಾ ರಾಮ್​
ಮದನ್​ ಕುಮಾರ್​
|

Updated on:Aug 15, 2023 | 7:56 PM

Share

ಕನ್ನಡದ ಖ್ಯಾತ ನಟಿ ರಚಿತಾ ರಾಮ್​ (Rachita Ram) ಅವರು ಸೋಮವಾರ (ಆಗಸ್ಟ್​ 14) ಲಾಲ್​ಬಾಗ್​ಗೆ ತೆರಳಿದ್ದಾಗ ಒಂದು ಅಚಾತುರ್ಯ ನಡೆದಿತ್ತು. ಫಲಪುಷ್ಪ ಪ್ರದರ್ಶನ ನೋಡಲು ಬಂದಿದ್ದಾಗ ಅವರ ಕಾರು ಪೌರ ಕಾರ್ಮಿಕರೊಬ್ಬರಿಗೆ ಡಿಕ್ಕಿ (Car Accident) ಆಗಿತ್ತು. ಚಾಲಕನ ಅಜಾಗರೂಕತೆಯಿಂದ ಈ ತಪ್ಪು ಜರುಗಿತ್ತು. ಆದರೆ ಕಾರಿನ ವೇಗ ಕಡಿಮೆ ಇದ್ದ ಕಾರಣದಿಂದ ಕೂದಲೆಳೆಯಲ್ಲಿ ದುರಂತ ತಪ್ಪಿ ಹೋಯಿತು. ಆ ಸಂದರ್ಭದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಒಂದು ದಿನ ಕಳೆದ ಬಳಿಕ ರಚಿತಾ ರಾಮ್​ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲದೇ, ಆ ಪೌರ ಕಾರ್ಮಿಕರನ್ನು (Pourakarmika) ಭೇಟಿಯಾಗಿ ಕ್ಷಮೆ ಕೇಳಿದ್ದಾರೆ. ರಚಿತಾ ರಾಮ್​ ಅವರ ಈ ನಡೆಗೆ ಅಭಿಮಾನಿಗಳು ಭೇಷ್​ ಎಂದಿದ್ದಾರೆ. ತಪ್ಪನ್ನು ತಿದ್ದಿಕೊಳ್ಳುವ ಗುಣವನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ.

‘ಎಲ್ಲರಿಗೂ ನಮಸ್ಕಾರ. ಇವತ್ತು ಸ್ವಾತಂತ್ರ್ಯ ದಿನಾಚರಣೆ. ನಾನು ಇವರಿಂದ ವಿಶ್​ ಮಾಡಿಸುತ್ತೇನೆ’ ಎನ್ನುವ ಮೂಲಕ ರಚಿತಾ ರಾಮ್​ ಅವರು ವಿಡಿಯೋದಲ್ಲಿ ಮಾತು ಆರಂಭಿಸಿದ್ದಾರೆ. ‘ನಿನ್ನೆ ಲಾಲ್​ಬಾಗ್​ಗೆ ಹೋದಾದ ಆಕಸ್ಮಿಕವಾಗಿ ಒಂದು ಘಟನೆ ನಡೆಯಿತು. ನನ್ನ ಗಾಡಿ ಇವರಿಗೆ ಟಚ್​ ಆಯಿತು. ನಿನ್ನೆ ಈ ಘಟನೆ ಆದಾಗ ನನ್ನ ಗಮನಕ್ಕೆ ಬರಲಿಲ್ಲ. ನಾನು ಸ್ವಲ್ಪ ಟೆನ್ಷನ್​ನಲ್ಲಿ ಇದ್ದೆ. ನನ್ನ ಕಡೆಯಿಂದ, ನನ್ನ ಡ್ರೈವರ್​ ಕಡೆಯಿಂದ ತಪ್ಪಾಗಿದೆ. ನನ್ನ ಡ್ರೈವರ್​ ಕೂಡ ಒಬ್ಬ ಕಾರ್ಮಿಕ. ಅವನ ಪರವಾಗಿ ಮತ್ತು ನನ್ನ ಕಡೆಯಿಂದ ನಾನು ಕ್ಷಮೆ ಕೇಳುತ್ತೇನೆ. ತಪ್ಪಾಯ್ತು ಅಣ್ಣ. ಕ್ಷಮಿಸಿ’ ಎಂದು ರಚಿತಾ ರಾಮ್​ ಹೇಳಿದ್ದಾರೆ.

‘ಏನಮ್ಮಿ..’ ಬಳಿಕ ಮತ್ತೊಂದು ಹಿಟ್​ ಹಾಡು ನೀಡಿದ ರಚಿತಾ ರಾಮ್-ಸತೀಶ್ ನೀನಾಸಂ; ‘ಮ್ಯಾಟ್ನಿ’ ಗೀತೆಗೆ ಮೆಚ್ಚುಗೆ

‘ಆಕಸ್ಮಿಕವಾಗಿ ಅದು ನಡೆಯಿತು. ಉದ್ದೇಶಪೂರ್ವಕವಾಗಿ ಮಾಡಿದ ತಪ್ಪು ಅಲ್ಲ. ಮನಸಾರೆ ನಾನು ಕ್ಷಮೆ ಕೇಳುತ್ತೇನೆ. ನಿನ್ನೆಯ ಘಟನೆಯಿಂದ ಕಾರ್ಮಿಕರಿಗೆ ಬೇಸರ ಆಗಿದ್ದರೆ ದಯವಿಟ್ಟು ಕ್ಷಮಿಸಿ. ಇಂದು ಸ್ವಾತಂತ್ರ್ಯ ದಿನಾಚರಣೆ. ಇದು ನನಗೆ ಸ್ಮರಣೀಯವಾಗಿರುತ್ತದೆ. ಈ ರೀತಿ ವಿಶ್​ ನನ್ನ ಕಡೆಯಿಂದ ಯಾವತ್ತೂ ಬಂದಿರಲಿಲ್ಲ’ ಎಂದು ಹೇಳಿದ್ದಾರೆ ರಚಿತಾ ರಾಮ್​.

ರಚಿತಾ ರಾಮ್ ಕ್ಷಮೆ ಕೇಳಿರುವ ವಿಡಿಯೋ:

ಅಂದಹಾಗೆ, ಲಾಲ್​ಬಾಗ್​ನಲ್ಲಿ ಕೆಲಸ ಮಾಡುವ ಈ ಪೌರ ಕಾರ್ಮಿಕರ ಹೆಸರು ರಂಗಪ್ಪ. ‘ನಿನ್ನೆಯಿಂದ ನಾನು ಇವರಿಗಾಗಿ ಕಾಯುತ್ತಿದ್ದೆ. ನಾವೇ ವಿಡಿಯೋ ಮಾಡಿ ಬಿಡುವ ಬದಲು ಪರ್ಸನಲ್​ ಆಗಿ ಭೇಟಿ ಮಾಡಿ ಕ್ಷಮೆ ಕೇಳಬೇಕು. ಹಾಗಾಗಿ ಅವರ ಮುಂದೆಯೇ ಕ್ಷಮೆ ಕೇಳುತ್ತಿದ್ದೇನೆ. ಇಂಥ ಘಟನೆ ಮತ್ತೊಮ್ಮೆ ಆಗದ ರೀತಿಯಲ್ಲಿ ನಾನು ನೋಡಿಕೊಳ್ಳುತ್ತೇನೆ’ ಎಂದು ರಚಿತಾ ರಾಮ್​ ಹೇಳಿದ್ದಾರೆ. ನೆಟ್ಟಿಗರು ಈ ವಿಡಿಯೋಗೆ ಹಲವು ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ನಿಮ್ಮದು ವಿಶಾಲ ಹೃದಯ’ ಎಂದು ಅಭಿಮಾನಿಗಳು ಹೊಗಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:51 pm, Tue, 15 August 23

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More