ರಚಿತಾ ರಾಮ್ ಕಾರು ಚಾಲಕನ ಅಜಾಗರೂಕತೆ; ಕೂದಲೆಳೆಯಲ್ಲಿ ತಪ್ಪಿದ ದುರಂತ
ಸಿನಿಮಾ ಕೆಲಸಗಳ ಬಿಡುವಿನಲ್ಲಿ ನಟಿ ರಚಿತಾ ರಾಮ್ ಅವರು ಫಲಪುಷ್ಪ ಪ್ರದರ್ಶನ ನೋಡಲು ಬಂದಿದ್ದಾರೆ. ಈ ವೇಳೆ ಲಾಲ್ಬಾಗ್ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ರಚಿತಾ ರಾಮ್ ಅವರ ಕಾರು ಡಿಕ್ಕಿ ಆಗಿದೆ. ವೇಗ ಕಡಿಮೆ ಇದ್ದಿದ್ದರಿಂದ ಸ್ವಲ್ಪದರಲ್ಲೇ ದುರಂತ ತಪ್ಪಿದೆ. ಈ ವಿಡಿಯೋ ವೈರಲ್ ಆಗಿದೆ.
ನಟಿ ರಚಿತಾ ರಾಮ್ (Rachita Ram) ಅವರು ಲಾಲ್ಬಾಗ್ಗೆ ಬಂದು ಫಲಪುಷ್ಪ ಪ್ರದರ್ಶನದಲ್ಲಿ ಭಾಗಿ ಆಗಿದ್ದಾರೆ. ಅವರ ಕಾರು ಚಾಲಕನ ಅಜಾಗರೂಕತೆಯಿಂದ ಅಲ್ಲಿದ್ದ ಕೆಲಸಗಾರರೊಬ್ಬರಿಗೆ ಕಾರು (Rachita Ram Car) ಡಿಕ್ಕಿ ಆಗಿದೆ. ಆದರೆ ವೇಗ ಕಡಿಮೆ ಇದ್ದಿದ್ದರಿಂದ ಅನಾಹುತ ಸ್ಪಲ್ಪದರಲ್ಲೇ ತಪ್ಪಿಹೋಗಿದೆ. ಕೂದಲೆಳೆಯಲ್ಲಿ ಆ ವ್ಯಕ್ತಿ ಬಚಾವ್ ಆಗಿದ್ದಾರೆ. ಅದನ್ನು ಕಂಡು ಅಲ್ಲಿದ್ದ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಪ್ರತಿ ಬಾರಿಯಂತೆ ಈ ವರ್ಷ ಕೂಡ ವಿಶೇಷ ಥೀಮ್ನಲ್ಲಿ ಫಲಪುಷ್ಪ ಪ್ರದರ್ಶನ (Lalbagh Flower Show) ಆಯೋಜನೆಗೊಂಡಿದೆ. ಸಿನಿಮಾ ಮತ್ತು ಇತರೆ ಕೆಲಸಗಳಲ್ಲಿ ಬ್ಯುಸಿ ಆಗಿರುವ ರಚಿತಾ ರಾಮ್ ಅವರು ಬಿಡುವು ಮಾಡಿಕೊಂಡು ಲಾಲ್ಬಾಗ್ಗೆ ಭೇಟಿ ನೀಡಿದರು. ಅವರನ್ನು ನೋಡಲು ಬಂದಿದ್ದ ಅಭಿಮಾನಿಗಳು ಮುಗಿಬಿದ್ದು ಸೆಲ್ಫಿ ತೆಗೆದುಕೊಂಡರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos