‘ಸಂಜು ವೆಡ್ಸ್ ಗೀತಾ 2’ ಸಿನಿಮಾಗೆ ರಚಿತಾ ರಾಮ್ ಆಯ್ಕೆ ಆಗಿದ್ದು ಹೇಗೆ?
ಮೊದಲ ಪಾರ್ಟ್ಗೆ ರಮ್ಯಾ ನಾಯಕಿ ಆಗಿದ್ದರು. ಎರಡನೇ ಪಾರ್ಟ್ನಲ್ಲಿ ಅವರ ಜಾಗಕ್ಕೆ ರಚಿತಾ ರಾಮ್ ಬಂದಿದ್ದಾರೆ. ಅವರ ಆಯ್ಕೆ ನಡೆದಿದ್ದು ಹೇಗೆ ಎನ್ನುವ ಪ್ರಶ್ನೆಗೆ ನಾಗಶೇಖರ್ ಉತ್ತರಿಸಿದ್ದಾರೆ.
ನಟಿ ರಚಿತಾ ರಾಮ್ (Rachita Ram) ಅವರು ‘ಸಂಜು ವೆಡ್ಸ್ ಗೀತಾ 2’ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಈ ಚಿತ್ರದ ಫೋಟೋಶೂಟ್ ಇತ್ತೀಚೆಗೆ ನಡೆದಿದೆ. ಶ್ರೀನಗರ ಕಿಟ್ಟಿ ಅವರು ಈ ಚಿತ್ರದ ನಾಯಕ. ಮೊದಲ ಪಾರ್ಟ್ಗೆ ರಮ್ಯಾ ನಾಯಕಿ ಆಗಿದ್ದರು. ಎರಡನೇ ಪಾರ್ಟ್ನಲ್ಲಿ ಅವರ ಜಾಗಕ್ಕೆ ರಚಿತಾ ರಾಮ್ ಬಂದಿದ್ದಾರೆ. ಅವರ ಆಯ್ಕೆ ನಡೆದಿದ್ದು ಹೇಗೆ ಎನ್ನುವ ಪ್ರಶ್ನೆಗೆ ನಾಗಶೇಖರ್ (Nagashekhar) ಉತ್ತರಿಸಿದ್ದಾರೆ. ‘ಮೊದಲು ರಮ್ಯಾ ಅವರನ್ನೇ ಕೇಳೋಣ ಎಂದುಕೊಂಡಿದ್ದೆ. ಅವರು ಸಿಗದೇ ಇದ್ದರೆ ಏನು ಮಾಡೋದು ಅನ್ನೋ ಪ್ರಶ್ನೆ ಬಂತು. ಆಗ ನೆನಪಾಗಿದ್ದು ರಚಿತಾ ರಾಮ್ ಹಾಗೂ ತ್ರಿಶಾ. ಮೊದಲು ರಚಿತಾ ಅವರನ್ನು ಕೇಳಿದೆ. ಅವರು ಖುಷಿಯಿಂದ ಒಪ್ಪಿಕೊಂಡರು’ ಎಂದಿದ್ದಾರೆ ನಿರ್ದೇಶಕ ನಾಗಶೇಖರ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos