ಬೆಳಗಾವಿ: ಪ್ರತಿಭಟನೆ ನಡೆಸಲು ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಧರಣಿ ನಡೆಸುತ್ತಿರುವ ಶಾಲಾ ಬಾಲಕ

ಅರುಣ್​ ಕುಮಾರ್​ ಬೆಳ್ಳಿ

Updated on: Dec 08, 2023 | 6:36 PM

ಹೆದ್ದಾರಿ ಬ್ಲಾಕ್ ಮಾಡಿದರೆ ಅದು ಸರ್ಕಾರದ ಗಮನಕ್ಕೆ ಬರುತ್ತದೆ; ಆದರೆ, ಪೊಲೀಸರು ತಮ್ಮನ್ನು ದೂರ ತಳ್ಳುತ್ತಿದ್ದಾರೆ, ನಮ್ಮ ಜಮೀನು ಹೋದರೆ, ಹೊಟ್ಟೆಗೆ ಅನ್ನ ಪೊಲೀಸರು ನೀಡುತ್ತಾರೆಯೇ? ಅಂತ ಬಾಲಕ ಪ್ರಶ್ನಿಸುತ್ತಾನೆ. ಪೊಲೀಸರು ಎಷ್ಟೇ ಅಡ್ಡಿಪಡಿಸಿದರೂ ತಾವು ಕಂದಾಯ ಸಚಿವ ಕೃಷ್ಣ ಬೈರೇ ಗೌಡ ಸ್ಥಳಕ್ಕೆ ಬಂದು ತಮಗೆ ಭರವಸೆ ನೀಡದ ಹೊರತು ಸ್ಥಳದಿಂದ ಕದಲವುದಿಲ್ಲ ಎಂದು ಬಾಲಕ ಹಟಕ್ಕೆ ಬಿದ್ದವರಂತೆ ಹೇಳುತ್ತಾನೆ.

ಬೆಳಗಾವಿ: ಈ ಶಾಲಾ ಬಾಲಕನ ನೋವು, ಹತಾಶೆ, ಅಸಹಾಯಕತೆ ಮತ್ತು ಸಿಟ್ಟನ್ನು ಸಿದ್ದರಾಮಯ್ಯ ಸರ್ಕಾರ ಅರ್ಥಮಾಡಿಕೊಳ್ಳಬೇಕಿದೆ. ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಕುಲವಳ್ಳಿ ಗ್ರಾಮ ಪಂಚಾಯಿತಿ (Kulavalli Gram Panchayat) ವ್ಯಾಪ್ತಿಯ 9 ಗ್ರಾಮಗಳ ರೈತರು, ರೈತ ಮಹಿಳೆಯರು ಮತ್ತು ಶಾಲೆಗಳಲ್ಲಿ ಓದುವ ಅವರ ಮಕ್ಕಳು ತಮ್ಮ ಭೂಮಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಬೆಳಗಾವಿಯ ಕಿತ್ತೂರು ಚೆನ್ನಮ್ಮ ಸರ್ಕಲ್ ನಲ್ಲಿ ಪ್ರತಿಭಟನೆ (protest) ಮಾಡುತ್ತಿದ್ದಾರೆ. ಉಳುವವನೇ ಜಮೀನಿನ ಒಡೆಯ ಯೋಜನೆ ಅಡಿ ಭೂಮಿ ಪಡೆದಿರುವ ರೈತರು ಹಕ್ಕುಪತ್ರಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ. ತಮ್ಮ ಪ್ರತಿಭಟನೆಗೆ ಅಡ್ಡಿಪಡಿಸುತ್ತಿರುವ ಪೊಲೀಸರ ವಿರುದ್ಧ ಬಾಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾನೆ. ಹೆದ್ದಾರಿ ಬ್ಲಾಕ್ ಮಾಡಿದರೆ ಅದು ಸರ್ಕಾರದ ಗಮನಕ್ಕೆ ಬರುತ್ತದೆ; ಆದರೆ, ಪೊಲೀಸರು ತಮ್ಮನ್ನು ದೂರ ತಳ್ಳುತ್ತಿದ್ದಾರೆ, ನಮ್ಮ ಜಮೀನು ಹೋದರೆ, ಹೊಟ್ಟೆಗೆ ಅನ್ನ ಪೊಲೀಸರು ನೀಡುತ್ತಾರೆಯೇ? ಅಂತ ಬಾಲಕ ಪ್ರಶ್ನಿಸುತ್ತಾನೆ. ಪೊಲೀಸರು ಎಷ್ಟೇ ಅಡ್ಡಿಪಡಿಸಿದರೂ ತಾವು ಕಂದಾಯ ಸಚಿವ ಕೃಷ್ಣ ಬೈರೇ ಗೌಡ (Krishna Byre Gowda) ಸ್ಥಳಕ್ಕೆ ಬಂದು ತಮಗೆ ಭರವಸೆ ನೀಡದ ಹೊರತು ಸ್ಥಳದಿಂದ ಕದಲವುದಿಲ್ಲ ಎಂದು ಬಾಲಕ ಹಟಕ್ಕೆ ಬಿದ್ದವರಂತೆ ಹೇಳುತ್ತಾನೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

.

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.