Video:ಹೆಲಿಕಾಪ್ಟರ್​ ಬಳಿ ಓಡಿ ಬಂದು ತೇಜಸ್ವಿ ಯಾದವ್ ಕಾಲಿಗೆ ಬಿದ್ದ ಯುವಕ

Updated on: Sep 14, 2025 | 2:29 PM

ಮುಜಫರ್​ಪುರದಲ್ಲಿ ಹೆಲಿಕಾಪ್ಟರ್​ ಬಳಿ ಯುವಕನೊಬ್ಬ ಓಡೋಡಿ ಬಂದು ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಕಾಲಿಗೆ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ಪ್ರಮುಖ ಭದ್ರತಾ ಲೋಪ ಎಂದು ಕರೆಯಲಾಗಿದೆ. ಶನಿವಾರ ಯಾದವ್ ಹೆಲಿಕಾಪ್ಟರ್‌ನಲ್ಲಿ ಹೊರಡಲು ಸಿದ್ಧತೆ ನಡೆಸುತ್ತಿದ್ದಾಗ ಯುವಕನೊಬ್ಬ ಇದ್ದಕ್ಕಿದ್ದಂತೆ ಭದ್ರತಾ ಕವಚವನ್ನು ಭೇದಿಸಿ ರನ್‌ವೇಗೆ ಓಡಿ ಅವರ ಕಾಲಿಗೆ ಬಿದ್ದಿದ್ದಾನೆ.

ಮುಜಫರ್ಪುರ, ಸೆಪ್ಟೆಂಬರ್ 14: ಮುಜಫರ್​ಪುರದಲ್ಲಿ ಹೆಲಿಕಾಪ್ಟರ್​ ಬಳಿ ಯುವಕನೊಬ್ಬ ಓಡೋಡಿ ಬಂದು ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಕಾಲಿಗೆ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ಪ್ರಮುಖ ಭದ್ರತಾ ಲೋಪ ಎಂದು ಕರೆಯಲಾಗಿದೆ. ಶನಿವಾರ ಯಾದವ್ ಹೆಲಿಕಾಪ್ಟರ್‌ನಲ್ಲಿ ಹೊರಡಲು ಸಿದ್ಧತೆ ನಡೆಸುತ್ತಿದ್ದಾಗ ಯುವಕನೊಬ್ಬ ಇದ್ದಕ್ಕಿದ್ದಂತೆ ಭದ್ರತಾ ಕವಚವನ್ನು ಭೇದಿಸಿ ರನ್‌ವೇಗೆ ಓಡಿ ಅವರ ಕಾಲಿಗೆ ಬಿದ್ದಿದ್ದಾನೆ.

ಆರ್‌ಜೆಡಿ ನಾಯಕ ಮುಜಫರ್‌ಪುರದಲ್ಲಿ ಕಾಂತಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಭಾರತ ರತ್ನ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು ಮತ್ತು ಅಂಬೇಡ್ಕರ್ ಉದ್ಯಾನವನವನ್ನು ಉದ್ಘಾಟಿಸಿದರು. ಸಾರ್ವಜನಿಕ ಸಭೆಯ ನಂತರ, ಅವರು ಹೆಲಿಕಾಪ್ಟರ್‌ನಲ್ಲಿ ಹೊರಡಲು ಸಿದ್ಧರಾಗುತ್ತಿದ್ದಾಗ, ಕಪ್ಪು ಶರ್ಟ್ ಧರಿಸಿದ ಯುವಕನೊಬ್ಬ ಹೆಲಿಕಾಪ್ಟರ್ ಕಡೆಗೆ ಓಡಿ ಹೋಗಿ ಯಾದವ್ ಕಾಲಿಗೆ ಬಿದ್ದಿದ್ದಾನೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ