ಒತ್ತುವರಿ ತೆರವು ಕಾರ್ಯಾಚರಣೆ: ಯಲಹಂಕ ನ್ಯೂ ಟೌನಲ್ಲಿ ಅಪಾರ್ಟ್ಮೆಂಟ್ವೊಂದರ ಸೆಕ್ಯುರಿಟಿ ಗಾರ್ಡ್ಗಳಿಂದ ತೀವ್ರ ಪ್ರತಿರೋಧ!
ಯಲಹಂಕ ನ್ಯೂ ಟೌನ್ ಎನ್ ಸಿ ಬಿಎಸ್ ವಸತಿ ಸಮುಚ್ಛಯದಲ್ಲಿ ಒತ್ತುವರಿ ಮಾಡಿಕೊಂಡಿರುವ ಭಾಗವನ್ನು ತೆರವು ಮಾಡಲು ಹೋದಾಗ ಗೇಟ್ ಬಳಿಯ ಗಾರ್ಡ್ಗಳು ಜೆಸಿಬಿಯನ್ನು ಒಳಗಡೆ ಬರಲು ಬಿಡದೆ ಸುಮಾರು ಸಮಯದವರೆಗೆ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು.
ಬೆಂಗಳೂರು: ಬಿಬಿಎಮ್ ಪಿ ಅಧಿಕಾರಿಗಳು ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ. ನಗರದ ನಾನಾ ಭಾಗಗಳಲ್ಲಿ ತಲೆಯೆತ್ತಿರುವ ಆಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಅಧಿಕಾರಿಗಳು ಆರಂಭಿಸಿದ್ದಾರೆ. ಆದರೆ ಕಾರ್ಯಾಚರಣೆಗೆ ನಿವಾಸಿಗಳಿಂದ, ಅಪಾರ್ಟ್ಮೆಂಟ್ ಗಳ ಸೆಕ್ಯರಿಟಿ ಗಾರ್ಡ್ ಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ. ಯಲಹಂಕ ನ್ಯೂ ಟೌನ್ ಎನ್ ಸಿ ಬಿಎಸ್ ವಸತಿ ಸಮುಚ್ಛಯದಲ್ಲಿ ಒತ್ತುವರಿ ಮಾಡಿಕೊಂಡಿರುವ ಭಾಗವನ್ನು ತೆರವು ಮಾಡಲು ಹೋದಾಗ ಗೇಟ್ ಬಳಿಯ ಗಾರ್ಡ್ಗಳು ಜೆಸಿಬಿಯನ್ನು ಒಳಗಡೆ ಬರಲು ಬಿಡದೆ ಸುಮಾರು ಸಮಯದವರೆಗೆ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು.