‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ

Updated on: Jul 29, 2026 | 10:22 PM

ಕನ್ನಡದ ಹಲವಾರು ಸಿನಿಮಾಗಳಲ್ಲಿ ಊರ್ವಶಿ ನಟಿಸಿದ್ದಾರೆ. ಆದರೆ ‘ರಾಮ ಶಾಮ ಭಾಮ’ ಬಳಿಕ ದೊಡ್ಡ ಗ್ಯಾಪ್ ಆಗಿತ್ತು. ಈಗ ‘ಬುಲ್ಲಿ’ ಸಿನಿಮಾದ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿ ವೇಳೆ ಊರ್ವಶಿ ಅವರು ಪುನೀತ್ ರಾಜ್​ಕುಮಾರ್ ಅವರನ್ನು ನೆನಪಿಸಿಕೊಂಡರು.

ಖ್ಯಾತ ನಟಿ ಊರ್ವಶಿ (Urvashi) ಅವರು ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ‘ರಾಮ ಶಾಮ ಭಾಮ’ ಸಿನಿಮಾದ ಬಳಿಕ ದೊಡ್ಡ ಗ್ಯಾಪ್ ಆಗಿತ್ತು. ಈಗ ‘ಬುಲ್ಲಿ’ ಸಿನಿಮಾದ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು. ಈ ವೇಳೆ ಊರ್ವಶಿ ಅವರು ಪುನೀತ್ ರಾಜ್​ಕುಮಾರ್ ಅವರನ್ನು ನೆನಪಿಸಿಕೊಂಡರು. ‘ಕನ್ನಡ ಚಿತ್ರರಂಗ ನನ್ನನ್ನು ಬಿಡಲ್ಲ. ಅದು ನನಗೆ ಗೊತ್ತು. ರಾಜ್​ಕುಮಾರ್ ಜೊತೆಯಲ್ಲಿ ನಾನು ನಟಿಸಿದೆ. ಅಪ್ಪು ಜೊತೆ ಒಂದು ಹಾಡಿನಲ್ಲಿ ನಟಿಸಿದೆ. ಒಂದಿನ ನನಗೆ ಅಪ್ಪು ಕರೆ ಮಾಡಿದರು. ವಯಸ್ಸಿನಲ್ಲಿ ನನಗಿಂತ 5-6 ವರ್ಷ ಮಾತ್ರ ವ್ಯತ್ಯಾಸ ಇರುವ ನೀನು ತಾಯಿ ಪಾತ್ರ ಯಾಕೆ ಮಾಡುತ್ತೀಯಾ ಅಂತ ಕೇಳಿದರು. ನಾನು ಗ್ಲಾಮರ್ ಮಾಡಲ್ಲ ಅಂದೆ. ಓಕೆ ನಾವಿಬ್ಬರು ಒಂದು ಡ್ಯಾನ್ಸ್ ಮಾಡೋಣ ಬಾ ಅಂತ ಕರೆದರು’ ಎಂದು ‘ರಾಜ್ ದಿ ಶೋ ಮ್ಯಾನ್’ ಸಿನಿಮಾದ ಚಿತ್ರೀಕರಣದ ದಿನಗಳನ್ನು ಊರ್ವಶಿ ಅವರು ನೆನಪಿಸಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More