Loading video

ಹಾಲು ಮತ್ತು ವಿದ್ಯುತ್ ದರ ಏರಿಕೆ ವಿರುದ್ಧ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹಿರಿಯ ನಾಗರಿಕರು

|

Updated on: Mar 28, 2025 | 11:21 AM

ಮತ್ತೊಬ್ಬ ಹಿರಿಯ ನಾಗರಿಕರು ಮಾತಾಡಿ ಸಂಸದ ಮತ್ತು ಶಾಸಕರಿಗೆ ಸಂಬಳ ಯಾಕೆ ಹೆಚ್ಚಿಸಬೇಕು? ಅವರಿಗೆ ಎಲ್ಲ ಸೌಕರ್ಯಗಳು ಸಿಗುತ್ತವೆ ಎಂದು ಹೇಳಿದರು. ಮಧ್ಯಮ ವರ್ಗದ ಜನರ ತುಂಬಾ ಕಷ್ಟಪಡಬೇಕಾಗುತ್ತಿದೆ, ನಮ್ಮಿಂದ ಕಿತ್ತುಕೊಂಡು ಬೇರೆಯವರಿಗೆ ಸರ್ಕಾರ ನೀಡುತ್ತದೆ, ಎಲ್ಲ ಬೆಲೆಗಳು ದುಬಾರಿಯಾಗಿವೆ, ಈ ಸರ್ಕಾರವನ್ನು ಕಿತ್ತೊಗೆದರೂ ಮುಂದಿನ ಸರ್ಕಾರ ಇದನ್ನು ಮುಂದುವರಿಸಿಕೊಂಡು ಹೋಗುತ್ತದೆ ಎಂದು ಅವರು ಹೇಳಿದರು.

ಮೈಸೂರು, ಮಾರ್ಚ್ 28: ಹಾಲು ಮತ್ತು ವಿದ್ಯುತ್ ದರ ಏರಿಕೆ ಹಿನ್ನೆಲೆಯಲ್ಲಿ ಜನ ರಾಜ್ಯ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಮೈಸೂರಲ್ಲಿ ನಮ್ಮ ವರದಿಗಾರನೊಂದಿಗೆ ಮಾತಾಡಿರುವ ನಿವೃತ್ತ ಅಧಿಕಾರಿಯೊಬ್ಬರು (retired official), ಏನು ಮಾತಾಡಿದರೂ ಪ್ರಯೋಜನವಿಲ್ಲ, ಈ ಸರ್ಕಾರದ ಆಡಳಿತದಲ್ಲಿ ಸುಧಾರಣೆ ಕಾಣೋದು ಸಾಧ್ಯವಿಲ್ಲ, ಅಧಿಕಾರದಲ್ಲಿದ್ದೇವೆಂಬ ದುರಹಂಕಾರ ಎಂದು ಹೇಳಿದರು. ಜನರಿಗೆ ಬಿಟ್ಟೀ ಗ್ಯಾರಂಟಿಗಳನ್ನು ನೀಡಿ ಉದ್ಯೋಗಗಳನ್ನು ಕಿತ್ತುಕೊಂಡರು, ಗ್ಯಾರಂಟಿಗಳಿಂದಾಗಿ ಅನೇಕರು ದುಡಿಯಲು ಹೋಗುವುದನ್ನು ಬಿಟ್ಟಿದ್ದಾರೆ, ರಾಜ್ಯವನ್ನು ಶ್ರೀಲಂಕಾ ಮತ್ತ್ತು ಪಾಕಿಸ್ತಾನದಂಥ ಸ್ಥಿತಿಗೆ ದೂಡುವ ದಿನಗಳು ದೂರವಿಲ್ಲ ಎಂದು ಅವರು ಹೇಳಿದರು.

ವಿಡಿಯೋ ಸ್ಟೋರಿಗಳಿಗಾಗಿ ಕ್ಲಿಕ್ ಮಾಡಿ

ಇದನ್ನೂ ಓದಿ:  Electricity Price Hike: ವಿದ್ಯುತ್ ದರ ಏರಿಕೆ, ಗ್ರಾಹಕರಿಗೆ ಶಾಕ್ ನೀಡಿದ ಕೆಇಆರ್​ಸಿ