Tumakuru: ಅಭಿಮಾನಿಯೊಬ್ಬರ ಪ್ರೀತಿ ವಿಶ್ವಾಸದ ಬಗ್ಗೆ ಮಾತಾಡುವಾಗ ಜಿ ಪರಮೇಶ್ವರ್ ವೇದಿಕೆಯ ಮೇಲೆಯೇ ಭಾವುಕರಾದರು!

ಅರುಣ್​ ಕುಮಾರ್​ ಬೆಳ್ಳಿ

Updated on: Feb 09, 2023 | 6:31 PM

ಸಂಬಂಧದಲ್ಲಿ ಅವನ್ಯಾರೋ ನಾನ್ಯಾರೋ, ಆದರೆ ಅವನಿಗೆ ನನ್ನ ಮೇಲಿರುವ ಅಭಿಮಾನ, ಪ್ರೀತಿ ಅಗಾಧವಾದದ್ದು ಎಂದು ಪರಮೇಶ್ವರ್ ಹೇಳಿದರು.

ತುಮಕೂರು: ತಮ್ಮ ಮೇಲೆ ಅಪಾರ ಪ್ರೀತಿ, ವಿಶ್ವಾಸ ಮತ್ತು ಅಭಿಮಾನವಿಟ್ಟುಕೊಂಡಿರುವ ಅಭಿಮಾನಿಯೊಬ್ಬರ ಬಗ್ಗೆ ಮಾತಾಡುವಾಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಾ ಡಿ ಪರಮೇಶ್ವರ್ (Dr G Parameshwar) ಅವರು ಭಾವುಕರಾದ ಸಂದರ್ಭ ಇಂದು ಕೊರಟಗೆರೆಯಲ್ಲಿ ನಡೆಯಿತು. ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ (Maruti auditorium) ಯಾದವ ಸಮುದಾಯದವರು (Yadava community) ಪರಮೇಶ್ವರ್ ಅವರಿಗೆ ಬೆಂಬಲ ಸೂಚಿಸುವ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮವೊಂದರಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳು ಅಭಿಮಾನಿಯ ಪ್ರೀತಿಗೆ ಕೃತಜ್ಞತೆ ಸಲ್ಲಿಸುವಾಗ ಗದ್ಗದಿತರಾದರು. ಸಂಬಂಧದಲ್ಲಿ ಅವನ್ಯಾರೋ ನಾನ್ಯಾರೋ, ಆದರೆ ಅವನಿಗೆ ನನ್ನ ಮೇಲಿರುವ ಅಭಿಮಾನ, ಪ್ರೀತಿ ಅಗಾಧವಾದದ್ದು ಎಂದು ಪರಮೇಶ್ವರ್ ಹೇಳಿದರು. ಅವರ ಅಭಿಮಾನಿ ಕೂಡ ಭಾವಾವೇಶಕ್ಕೊಳಗಾಗಿ ಕಣ್ಣೀರು ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 09, 2023 06:30 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.