ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಗಳಗಳನೆ ಕಣ್ಣೀರು ಹಾಕಿದ ಸಿರಿ

|

Updated on: Nov 29, 2023 | 2:46 PM

ಟಾಸ್ಕ್​ ವೇಳೆ ಕೆಲವರು ಮೈ ಮೇಲೆ ಬಿದ್ದಿದ್ದಾರೆ. ಇದರಿಂದ ಮಹಿಳಾ ಸ್ಪರ್ಧಿಗಳಿಗೆ ತೊಂದರೆ ಆಗಿದೆ. ಸಿರಿ ಅವರು ಕಣ್ಣೀರು ಹಾಕಿದ್ದಾರೆ. ಈ ಸಂದರ್ಭದ ವಿಡಿಯೋ ಇಲ್ಲಿದೆ. ನವೆಂಬರ್​ 29ರ ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಈ ಸಂಚಿಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಲೈವ್​ ನೋಡಲು ಅವಕಾಶ ಇದೆ.

ಸೀರಿಯಲ್​ ನಟಿ ಸಿರಿ ಅವರು ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ ಕಣ್ಣೀರು ಹಾಕಿದ್ದಾರೆ. ಬಿಗ್​ ಬಾಸ್​ ನೀಡಿದ ಟಾಸ್ಕ್​ ಮಾಡುವಾಗ ಕೆಲವರು ಅಗ್ರೆಸಿವ್​ ಆಗಿ ನಡೆದುಕೊಂಡಿದ್ದಾರೆ. ಆಟ ಗೆಲ್ಲಲೇಬೇಕು ಎಂಬ ಜಿದ್ದಿನಿಂದ ಒಬ್ಬರ ಮೇಲೆ ಮತ್ತೊಬ್ಬರು ಬಿದ್ದಿದ್ದಾರೆ. ಇದರಿಂದ ಕೆಲವು ಸ್ಪರ್ಧಿಗಳಿಗೆ ನೋವಾಗಿದೆ. ಸ್ನೇಹಿತ್​ (Snehith Gowda), ಮೈಕೆಲ್​ ಮುಂತಾದವರು ಬಲ ಪ್ರಯೋಗಿಸಿ ಬೇರೆಯವರನ್ನು ತಳ್ಳಿದ್ದಾರೆ. ‘ಇಷ್ಟೊಂದು ಫಿಸಿಕಲ್​ ಬೇಕಾ ಸ್ನೇಹಿತ್​’ ಎಂದು ಮನೆ ಮಂದಿ ಪ್ರಶ್ನೆ ಮಾಡಿದ್ದಾರೆ. ‘ಏನಿದು ರಾಕ್ಷಸರ ರೀತಿ..’ ಎಂದು ಮಹಿಳಾ ಸ್ಪರ್ಧಿಗಳು ಟೀಕಿಸಿದ್ದಾರೆ. ಈ ಟಾಸ್ಕ್​ನಲ್ಲಿ ಕೆಲವರು ನಡೆದುಕೊಂಡ ರೀತಿಯಿಂದ ಸಿರಿಗೆ (Siri) ಕಷ್ಟ ಆಗಿದೆ. ಅವರು ನೋವಿನಿಂದ ಕಣ್ಣೀರು ಹಾಕಿದ್ದಾರೆ. ಇದರ ಪ್ರೋಮೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.