ಹೆಚ್​ಬಿಅರ್ ಲೇಔಟ್​ನಲ್ಲಿ ಮಳೆಯಿಂದಾಗಿ ರಾಜಾ ಕಾಲುವೆಯ ಕೊಳಚೆ ನೀರು ಮನೆಗಳಿಗೆ ನುಗ್ಗಿ ಅಸಹನೀಯ ಸನ್ನಿವೇಶ

ಅರುಣ್​ ಕುಮಾರ್​ ಬೆಳ್ಳಿ

Updated on: May 19, 2025 | 4:06 PM

ನಗರದ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದ ಸರ್ಕಾರ ಇದನ್ನು ಗ್ರೇಟರ್ ಬೆಂಗಳೂರು ಅಂತ ಮಾಡಿರುವುದಲ್ಲಿ ಏನಾದರೂ ಅರ್ಥವಿದೆಯಾ ಎಂದು ಮನೆಯ ಯಜಮಾನಿ ಹೇಳುತ್ತಾರೆ. ಅವರು ಮತ್ತು ಅವರ ಪತಿ ಇಬ್ಬರೂ ಸಾಫ್ಟ್​ವೇರ್ ಇಂಜಿನೀಯರ್​ಗಳು, ಅದರೆ ಚರಂಡಿ ನೀರು ಮನೆಯಲ್ಲಿ ನುಗ್ಗಿರುವುದರಿಂದ ರಜಾ ಹಾಕಿ ಮನೆಯನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿದ್ದಾರಂತೆ.

ಬೆಂಗಳೂರು, ಮೇ 19: ಬೆಂಗಳೂರಲ್ಲಿ ಮಳೆಯಾದರೆ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಅವಾಂತರ. ಹೆಬಿಅರ್ ಲೇಔಟ್ (HBR layout) ಐದನೇ ಬ್ಲಾಕ್​ನಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ರಾಜಾಕಾಲುವೆಯಲ್ಲಿ ನೀರು ಉಕ್ಕಿ ಮನೆಗಳಲೆಲ್ಲ ಕೊಳಚೆ ಚರಂಡಿ ನೀರು ನುಗ್ಗಿದೆ. ನಮ್ಮ ಬೆಂಗಳೂರು ವರದಿಗಾರ ಏರಿಯಾದಲ್ಲಿನ ಮನೆಯೊಂದರಲ್ಲಿರುವ ಸಂಪುಗಳಲ್ಲಿ ಚರಂಡಿ ನೀರು ತುಂಬಿರುವ ದೃಶ್ಯ ತೋರಿಸುತ್ತಿದ್ದಾರೆ. ಏರಿಯಾದಲ್ಲಿ ಹರಿಯುವ ರಾಜಾ ಕಾಲುವೆಯ ವಾಲ್ವ್ ಬಂದ್ ಮಾಡಿ ಅಂತ 6 ತಿಂಗಳಿಂದ ಹೇಳುತ್ತಿದ್ದರೂ ಬಿಡಿಎ ಅಧಿಕಾರಿಗಳು ಕಿವಿಗೆ ಹಾಕ್ಕೊಳ್ಳುತ್ತಿಲ್ಲವಂತೆ. ಅಂದಹಾಗೆ, ಇದು ಬಿಡಿಎ ಅಭಿವೃದ್ಧಿಗೊಳಿಸಿರುವ ಲೇಔಟ್.

ಇದನ್ನೂ ಓದಿ:   ಮಳೆಗೆ ಸಣ್ಣಪುಟ್ಟ ಸಮಸ್ಯೆ ಆಗೇ ಆಗುತ್ತೆ: ಬಿಬಿಎಂಪಿ ಆಯುಕ್ತ ಉಡಾಫೆ ಮಾತು!

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.