Shakti scheme: ಫ್ರೀ ಬಸ್​​ ಕಂಡಿದ್ದೇ ತಡ ಅಕ್ಷರಶಃ ಟೆಂಪಲ್​​ ರನ್​​ನಲ್ಲಿರುವ ಮಹಿಳಾ ಶಕ್ತಿಗಳು! ದೇವಸ್ಥಾನಗಳ ಹುಂಡಿಗಳು ತುಂಬಿತುಳುಕುತ್ತಿವೆ!

|

Updated on: Jun 30, 2023 | 12:38 PM

ಅದೃಷ್ಟ ಖುಲಾಯಿಸುವುದು ಅಂದ್ರೆ ಇದೇನೇ! ಯಾರ ಯಾರ ನಸೀಬು ಹೆಂಗೆ ಬದಲಾಗುತ್ತದೋ ಆ ಪರಮಾತ್ಮನೆ ಬಲ್ಲ; ಇದು ಆ ದೇವರಿಗೂ ಅನ್ವಯಿಸುತ್ತದೆ ನೋಡಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಭಾಗ್ಯಗಳನ್ನು ಕಲ್ಪಿಸಿದ್ದೇ ತಡ... ಮಹಿಳಾ ಶಕ್ತಿಗಳು ಫ್ರೀ ಬಸ್​​ನಲ್ಲಿ ಅಕ್ಷರಶಃ ಟೆಂಪಲ್​​ ರನ್​​ನಲ್ಲಿದ್ದಾರೆ. ಹೀಗೆ ಸಾಕ್ಷಾತ್​​ ಹೆಣ್ಣುಮಕ್ಕಳು ದೇಗುಲಗಳಿಗೆ ಎಡತಾಕುತ್ತಿದ್ದಂತೆ ಅಲ್ಲಿ ಹುಂಡಿಗಳು ಭರಪೂರ ತುಂಬುತ್ತಿವೆ.

ಅದೃಷ್ಟ ಖುಲಾಯಿಸುವುದು ಅಂದ್ರೆ ಇದೇನೇ! ಯಾರ ಯಾರ ನಸೀಬು ಹೆಂಗೆ ಬದಲಾಗುತ್ತದೋ ಆ ಪರಮಾತ್ಮನೆ ಬಲ್ಲ; ಇದು ಆ ದೇವರಿಗೂ ಅನ್ವಯಿಸುತ್ತದೆ ನೋಡಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಭಾಗ್ಯಗಳನ್ನು ಕಲ್ಪಿಸಿದ್ದೇ ತಡ… ಮಹಿಳಾ ಶಕ್ತಿಗಳು ಫ್ರೀ ಬಸ್​​ನಲ್ಲಿ ಅಕ್ಷರಶಃ ಟೆಂಪಲ್​​ ರನ್​​ನಲ್ಲಿದ್ದಾರೆ. ಹೀಗೆ ಸಾಕ್ಷಾತ್​​ ಹೆಣ್ಣುಮಕ್ಕಳು ದೇಗುಲಗಳಿಗೆ ಎಡತಾಕುತ್ತಿದ್ದಂತೆ ಅಲ್ಲಿ ಹುಂಡಿಗಳು ಭರಪೂರ ತುಂಬುತ್ತಿವೆ. ಇನ್ನು, ಮಹಿಳೆಯರೇನೂ ಬರಿಗೈಲಿ ದೇವರಿಗೆ ಹರಕೆ ಹೊತ್ತುಕೊಳ್ಳುತ್ತಾರಾ? ನಾಲ್ಕು ಕಾಸು ಹಾಕಿ ಅಪ್ಪ ತಂದೆ-ಅಮ್ಮ ತಾಯೀ ನೀನೇ ದೊಡ್ಡವಳು… ಕಾಪಾಡು ಎಂದು ನಾಲ್ಕಾರು ಕಾಸು ಹಾಕುತ್ತಾರೆ. ತನ್ಮೂಲಕ ದೇಗುಲಗಳ ಹುಂಡಿಗಳು ಭರ್ತಿಯಾಗತೊಡಗಿದೆ. ಈ ಸಾಲಿನಲ್ಲಿ ಕೊಪ್ಪಳದ ಆರಾಧ್ಯದೇವಿ ಹುಯಲಿಗೆಮ್ಮ ದೇವಸ್ಥಾನದಲ್ಲಿ ಹುಂಡಿ ತುಂಬಿತುಳುಕುತ್ತಿದೆ! ರಾಜ್ಯದಲ್ಲಿ ಶಕ್ತಿ ಯೋಜ‌ನೆ ಜಾರಿಯಾಗಿದ್ದೇ ತಡ.‌ ನಾರಿಮಣಿಯರು ಬಸ್ ಹತ್ತಿ ಸೀದಾ ಪುಣ್ಯಕ್ಷೇತ್ರಗಳ ಕಡೆ ಮುಖಮಾಡಿದ್ದಾರೆ. ಪರಿಣಾಮ ಕೊಪ್ಪಳದ ಆರಾಧ್ಯದೈವ ಹುಲಿಗೆಮ್ಮ ಒಂದೇ ತಿಂಗಳಲ್ಲಿ ಕೋಟ್ಯಾಧೀಶರಾಗಿದ್ದಾರೆ.

ಹೌದು. ಕಳೆದ ಜೂನ್ 11 ರಂದು ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಮೊದಲ ಗ್ಯಾರೆಂಟಿ ಯೋಜನೆ ಜಾರಿ ಮಾಡಿತ್ತು. ಅದು ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸೋ ಶಕ್ತಿ ಯೋಜನೆ. ಶಕ್ತಿ ಯೋಜನೆ ಜಾರಿಯಾಗಿದ್ದೇ ತಡ ರಾಜ್ಯದಲ್ಲಿ ಬಸ್ ಗಳು ಫುಲ್ ರಷ್ ಆಗಿವೆ. ಬಸ್ ನಲ್ಲಿ ನಿಲ್ಲೋಕೂ ಜಾಗ ಸಿಗ್ತಿಲ್ಲ. ಆ ಮಟ್ಟಿಗೆ ರಾಜ್ಯದಲ್ಲಿ ಮಹಿಳಾ ಮಣಿಗಳು ಬಸ್ ನಲ್ಲಿ ಪ್ರಯಾಣ ಮಾಡ್ತಿದ್ದಾರೆ.ಅದರಲ್ಲೂ ಕೆಲವರಂತೂ ವೀಕೆಂಡ್ ಬಂತು ಅಂದ್ರೆ ಸಾಕು ಪುಣ್ಯಕ್ಷೇತ್ರಗಳ ಪ್ರವಾಸ ಹೊರಟಿದ್ದಾರೆ. ಅಂತೇಯೇ ಕೊಪ್ಪಳ ಜಿಲ್ಲೆಯ ಪುರಾಣ ಪ್ರಸಿದ್ದ ಹುಲಿಗೆಮ್ಮ ದೇವಸ್ಥಾನಕ್ಕೆ ಮಹಿಳಾ ಭಕ್ತರ ಮುಗಿಬಿದ್ದು ಬರ್ತಿದ್ದಾರೆ. ಪರಿಣಾಮ ದೇವಿಯ ಹುಂಡಿ ಆದಾಯ ಡಬಲ್‌ ಆಗಿದೆ. ಹುಲಗಿಯಲ್ಲಿ ಹುಂಡಿ ಏಣಿಕೆ ಮಾಡಲಾಗಿ ಕೇವಲ ಒಂದೇ ತಿಂಗಳಲ್ಲಿ ಬರೋಬ್ಬರಿ ಒಂದು ಕೋಟಿ ಕಾಣಿಕೆ ಸಂಗ್ರಹವಾಗಿದೆ. ಅದರಲ್ಲಿ 225 ಗ್ರಾಂ ಚಿನ್ನ,14 kg ಬೆಳ್ಳಿ ಸಂಗ್ರಹವಾಗಿದೆ.

ಇನ್ನು ಕಳೆದ ಮಾರ್ಚ್​​​-ಏಪ್ರಿಲ್ ತಿಂಗಳುಗಳಲ್ಲಿ 79 ಲಕ್ಷ ರೂಪಾಯಿ ಹುಂಡಿ ಸಂಗ್ರಹ ಆಗಿದ್ರೆ, ಮೇ ತಿಂಗಳಲ್ಲಿ ಜಾತ್ರೆಯಿದ್ರು ಒಂದು ಕೋಟಿ ರೂ ಸಂಗ್ರಹ ಆಗಿತ್ತು. ಅದ್ರೆ ಶಕ್ತಿ ಯೋಜನೆ ಜಾರಿಯಾಗಿದ್ದೆ ತಡ, ಹುಲಿಗೆಮ್ಮ ದೇವಿಯ ಭಕ್ತ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿದೆ. ಅಷ್ಟೆ ಏಕೆ ಪ್ರಸಾದ ವಿತರಣೆಯಲ್ಲೂ ಡಬಲ್ ಆಗಿದೆ! ಶಕ್ತಿ ಯೋಜನೆಗಿಂತ ಮೊದಲು ಪ್ರತಿನಿತ್ಯ ಹುಲಿಗೆಮ್ಮ ದೇವಸ್ಥಾನದಲ್ಲಿ ಒಂದೂವರೆ ಕ್ವಿಂಟಲ್ ಅಕ್ಕಿಯಲ್ಲಿ ಅನ್ನಪ್ರಸಾದ ವಿತರಣೆ ಮಾಡಲಾಗುತ್ತಿತ್ತಂತೆ. ಅದೇ ಕಳೆದ 15-20 ದಿನಗಳಿಂದ ಪ್ರತಿನಿತ್ಯ 3 ಕ್ವಿಂಟ್ವಾಲ್ ಅಕ್ಕಿ ಖರ್ಚಾಗಯತ್ತಿದೆಯಂತೆ. ಬಹುತೇಕ ಎಲ್ಲ ದೇಗುಲಗಳ ಪರಿಸ್ಥಿತಿಯೂ ಇದೇ ಆಗಿದೆ.