Chitradurga: ವಿಧಿವಶರಾಗುವ ಮೊದಲು ಒಂಟಿಯಾಗಿ ಜೀವಿಸುತ್ತಿದ್ದ ಸನ್ಯಾಸಿಯ ಮನೆಯಲ್ಲಿ ಸಿಕ್ಕಿತು ಲಕ್ಷಾಂತರ ಹಣ!
ಮೃತರು ಅಷ್ಟೊಂದು ಹಣವನ್ನು ತಮ್ಮ ಬಳಿ ಯಾಕೆ ಇಟ್ಟುಕೊಂಡಿದ್ದರು ಅನ್ನೋದು ನಿಗೂಢವಾಗಿದೆ.
ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆಯಲ್ಲಿ ವಾಸವಾಗಿದ್ದ ಮತ್ತು ಸನ್ಯಾಸಿಯಾಗಿ ಒಂಟಿ ಬದುಕು ನಡೆಸುತ್ತಿದ್ದ ಗಂಗಾಧರ ಶಾಸ್ತ್ರಿ (Gangadhar Shastri) ನಿನ್ನೆ ಮೃತಪಟ್ಟಿದ್ದು ಅವರ ಮನೆಯಲ್ಲಿ ಲಕ್ಷಾಂತರ ಹಣ ಪತ್ತೆಯಾಗಿದೆ. ನಮಗೆ ಲಭ್ಯವಿರುವ ಮೂಲಗಳ ಪ್ರಕಾರ ಶಾಸ್ತ್ರಿಯವರ ಹೆಸರಲ್ಲಿ 16 ಎಕರೆ ಜಮೀನು (farmland) ಮತ್ತು 4 ಎಕರೆ ತೆಂಗಿನ ತೋಟವಿದೆ. ಅಂತ್ಯಸಂಸ್ಕಾರ ನಡೆಸಿದ ಬಳಿಕ ಅವರು ವಾಸವಾಗಿದ್ದ ಮನೆಯನ್ನು ಸ್ಥಳೀಯರು ಸ್ವಚ್ಛಗೊಳಿಸುವಾಗ ಸುಮಾರು 30 ಲಕ್ಷ ರೂ. ಗಳಷ್ಟು ನಗದು ಸಿಕ್ಕಿದೆ. ಭಕ್ತರು (devotees) ನೀಡಿದ ಕಾಣಿಕೆ ಇದರಲ್ಲಿ ಸೇರಿದೆ ಎಂದು ಹೇಳಲಾಗಿದೆ. 70 ವರ್ಷದ ಪ್ರಾಯದವರಾಗಿದ್ದ ಶಾಸ್ತ್ರಿ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಮತ್ತು ಬಟ್ಟೆ ಚೀಲಗಳಲ್ಲಿ ಹಣ ಕಟ್ಟಿಟ್ಟಿದ್ದು ವಿಡಿಯೋದಲ್ಲಿ ಕಾಣಿಸುತ್ತದೆ. ಮೃತರು ಅಷ್ಟೊಂದು ಹಣವನ್ನು ತಮ್ಮ ಬಳಿ ಯಾಕೆ ಇಟ್ಟುಕೊಂಡಿದ್ದರು ಅನ್ನೋದು ನಿಗೂಢವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ