ಒಂದು ಆಧಾರ್​ ಕಾರ್ಡ್​ನ ಎರಡು ಪ್ರತಿಗಳನ್ನು ತೋರಿಸಿ KSRTCಯಲ್ಲಿ ಪ್ರಯಾಣ, ಸಿಕ್ಕಿಬಿದ್ದ ಇಬ್ಬರು ಮಹಿಳೆಯರು

| Updated By: Rakesh Nayak Manchi

Updated on: Dec 10, 2023 | 3:51 PM

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರಂಟಿ ಶಕ್ತಿ ಯೋಜನೆಯು ಮಹಿಳೆಯರಿಗೆ ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ನೀಡುತ್ತಿದೆ. ಆಧಾರ್ ಕಾರ್ಡ್ ತೋರಿಸಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಆದರೆ, ಒಂದೇ ನಂಬರ್​ನ ಎರಡು ಆಧಾರ್​ ಕಾರ್ಡ್​ಗಳನ್ನು ತೋರಿಸಿ ಪ್ರಯಾಣಿಸಲು ಯತ್ನಿಸಿದ ಇಬ್ಬರು ಮಹಿಳೆಯರು ನಿರ್ವಾಹಕನ ಕೈಗೆ ಸಿಕ್ಕಿಬಿದ್ದಿದ್ದಾರೆ.

ಹುಬ್ಬಳ್ಳಿ, ಡಿ.10: ಶಕ್ತಿ ಯೋಜನೆಯಡಿ (Shakti Scheme) ಮಹಿಳೆಯರು ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಹೀಗಿದ್ದಾಗಲೂ ಇಬ್ಬರು ಮಹಿಳೆಯರು ಮೋಸ ಮಾಡಿ ಪ್ರಯಾಣ ಮಾಡಲು ಮುಂದಾಗಿ ಸಿಕ್ಕಿಬಿದ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹೌದು, ಹುಬ್ಬಳ್ಳಿಯ (Hubballi) ನೇಕಾರ ನಗರದಿಂದ ಕಿಮ್ಸ್ ಕಡೆಗೆ ಹೋಗುವ ಬಸ್​​ನಲ್ಲಿ ಬುರ್ಖಾ ಹಾಕಿರುವ ಇಬ್ಬರು ಮುಸ್ಲಿಂ ಮಹಿಳೆಯರು ಒಂದೇ ಆಧಾರ್ ಕಾರ್ಡ್​ನ ಎರಡು ಪ್ರತಿಗಳನ್ನು ತೋರಿಸಿ ಪ್ರಯಾಣಿಸುತ್ತಿದ್ದಾಗ ನಿರ್ವಾಹಕನ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ