ಶಕ್ತಿ ಯೋಜನೆ ಎಫೆಕ್ಟ್, ಸೀಟ್ ಮೇಲೇರಿ ಟಿಕೆಟ್​ ನೀಡಿದ ಬಸ್ ಕಂಡಕ್ಟರ್: ವಿಡಿಯೋ ವೈರಲ್

ಬಸ್​ನಲ್ಲಿ ಮಹಿಳೆಯರೇ ತುಂಬಿಕೊಂಡಿದ್ದರಿಂದ ನಿರ್ವಾಹಕರು ಟಿಕೆಟ್ ನೀಡಲು ಹರಸಾಹಸಪಡುವಂತಾಗಿದೆ.​ ಬಸ್ ಹತ್ತಿದವರಿಗೆ ಟಿಕೆಟ್​ ನೀಡುವ ಸಲುವಾಗಿ ಕಂಡಕ್ಟರ್ ಸೀಟ್ ಮೇಲೆ ಹತ್ತಿ ಕುಳಿತ ವಿಡಿಯೋ ಫುಲ್ ವೈರಲ್ ಆಗಿದೆ.

ವಿಜಯಪುರ: ಮಹಿಳೆಯರಿಗೆ ಬಸ್ ಟಿಕೆಟ್ ಉಚಿತ ಎಂಬ ಘೋಷಣೆಯ ‘ಶಕ್ತಿ’ ಯೋಜನೆ (KSRTC Free Bus for Women) ಜಾರಿ ಬಂದಿದ್ದು, ಮಹಿಳೆಯರು ಫುಲ್ ಖುಷ್ ಆಗಿದ್ದಾರೆ. ಅಲ್ಲದೇ ಸರ್ಕಾರಿ ಬಸ್​ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಓಡಾಡುವ ಸರ್ಕಾರಿ ಬಸ್ ಗಳು ಹೌಸ್ ಫುಲ್ ಆಗಿವೆ. ಫ್ರೀ ಟಿಕೆಟ್ ಹಿನ್ನೆಲೆಯಲ್ಲಿ ತೀರ್ಥ ಕ್ಷೇತ್ರಗಳಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದೆ. ಇನ್ನೊಂದೆಡೆ ನಿತ್ಯ ಕೆಲಸಕ್ಕೆ ಹೋಗುವವರು, ಕಾಲೇಜು ವಿದ್ಯಾರ್ಥಿಗಳು ಬಸ್ ಹತ್ತಲಾಗದೇ ಪರದಾಡಿರುವ ವಿಡಿಯೋಗಳು ಹರಿದಾಡುತ್ತಿವೆ. ಇದರ ಮಧ್ಯೆ ಬಸ್ ನಲ್ಲಿ ಮಹಿಳೆಯರ ಪ್ರಯಾಣ ಹೆಚ್ಚಾಗಿದ್ದರಿಂದ ಕಂಡಕ್ಟರ್ ಸಹ ಪರದಾಡುವಂತಾಗಿದೆ. ಹೌದು.. ಬಸ್​ನಲ್ಲಿ ಮಹಿಳೆಯರೇ ತುಂಬಿಕೊಂಡಿದ್ದರಿಂದ ನಿರ್ವಾಹಕರು ಟಿಕೆಟ್ ನೀಡಲು ಹರಸಾಹಸಪಡುವಂತಾಗಿದೆ.​ ಬಸ್ ಹತ್ತಿದವರಿಗೆ ಟಿಕೆಟ್​ ನೀಡುವ ಸಲುವಾಗಿ ಕಂಡಕ್ಟರ್ ಸೀಟ್ ಮೇಲೆ ಹತ್ತಿ ಕುಳಿತ್ತಿದ್ದಾರೆ. ಅಫಜಲಪುರ to ಬ್ಯಾಡಗಿ ಬಸ್​ನ ಕಂಡಕ್ಟರ್​ , ಸೀಟ್ ಮೇಲೆ ಕುಳಿತುಕೊಂಡು ಪ್ರಯಾಣಿಕರಿಗೆ ಟಿಕೆಟ್ ವಿತರಿಸುತ್ತಿರುವ ವಿಡಿಯೋ ಫುಲ್ ವೈರಲ್ ಆಗಿದೆ.

Published On - 4:27 pm, Wed, 14 June 23

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us