ಲೈವ್​ನಲ್ಲೇ ಯಾಮಾರಿದ ದಿವ್ಯಾ ಸುರೇಶ್​; ವೈರಲ್​ ಆಯ್ತು ವಿಡಿಯೋ

| Updated By: ರಾಜೇಶ್ ದುಗ್ಗುಮನೆ

Updated on: Aug 11, 2021 | 3:13 PM

ದಿವ್ಯಾ ಸುರೇಶ್​ ಟಿವಿ9 ಕನ್ನಡ ಸ್ಟುಡಿಯೋಗೆ ಬಂದಿದ್ದರು. ಈ ವೇಳೆ ಅವರಿಗೆ ಅಭಿಮಾನಿಗಳ ಜತೆ ಫೋನ್​ ಕಾಲ್​ ಮೂಲಕ ಮಾತನಾಡುವ ಅವಕಾಶ ಕಲ್ಪಿಸಿ ಕೊಡಲಾಗಿತ್ತು.

ಕನ್ನಡ ಬಿಗ್​ ಬಾಸ್​ ಸೀಸನ್​ 8 ಫಿನಾಲೆ ಪ್ರವೇಶಿಸುವುದು ದಿವ್ಯಾ ಸುರೇಶ್​ಗೆ ಕೂದಲೆಳೆಯ ಅಂತರದಲ್ಲಿ ತಪ್ಪಿತ್ತು. ಫಿನಾಲೆಗೆ ಕೆಲವೇ ದಿನ ಬಾಕಿ ಇರುವಾಗ ದಿವ್ಯಾ ಸುರೇಶ್​ ಔಟ್​ ಆಗಿದ್ದರು. ಈಗ ದಿವ್ಯಾ ಲೈವ್​​ನಲ್ಲೇ ಯಾಮಾರಿದ್ದಾರೆ. ಈ ವಿಡಿಯೋ ಈಗ ವೈರಲ್​ ಆಗಿದೆ.

ದಿವ್ಯಾ ಸುರೇಶ್​ ಟಿವಿ9 ಕನ್ನಡ ಸ್ಟುಡಿಯೋಗೆ ಬಂದಿದ್ದರು. ಈ ವೇಳೆ ಅವರಿಗೆ ಅಭಿಮಾನಿಗಳ ಜತೆ ಫೋನ್​ ಕಾಲ್​ ಮೂಲಕ ಮಾತನಾಡುವ ಅವಕಾಶ ಕಲ್ಪಿಸಿ ಕೊಡಲಾಗಿತ್ತು. ಆಗ ದಿವ್ಯಾಗೆ ಕನಕಪುರದಿಂದ ಒಂದು ಕರೆ ಬಂದಿತ್ತು. ನಾನು ನಿಮ್ಮ ಅಭಿಮಾನಿ ಎಂದು ಕರೆ ಮಾಡಿದ ವ್ಯಕ್ತಿ ಪರಿಚಯಿಸಿಕೊಂಡಿದ್ದರು. ಕೊನೆಯಲ್ಲಿ ಅದು ಶಮಂತ್​ ಬ್ರೋ ಗೌಡ ಎನ್ನುವ ವಿಚಾರ ದಿವ್ಯಾಗೆ ತಿಳಿದಿದೆ. ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ.

ಇದನ್ನೂ ಓದಿ: ‘ನಾನು ಏನೇ ಹೇಳಿದ್ರೂ ಅದು ಮಂಜುಗೆ ಕನೆಕ್ಟ್​ ಆಗ್ತಿತ್ತು’; ಬಿಗ್​ ಬಾಸ್​ ವಿನ್ನರ್​ ಬಗ್ಗೆ ದಿವ್ಯಾ ಸುರೇಶ್​ ಮಾತು

Follow us on