ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿರುವಂತಿದೆ!

ಅರುಣ್​ ಕುಮಾರ್​ ಬೆಳ್ಳಿ

Updated on: Oct 02, 2023 | 6:22 PM

ಚಿಕ್ಕಪುಟ್ಟ ನಾಯಕರು ಸಹ ತನ್ನ ವಿರುದ್ಧ ಮಾತಾಡುತ್ತಿರುವುದರಿಂದ ಸಿಡಿಮಿಡಿಗೊಳ್ಳುತ್ತಿರುವ ಶಿವಶಂಕರಪ್ಪನವರಿಗೆ ಮಾಧ್ಯಮ ಪ್ರತಿನಿಧಿಗಳು ಅದೇ ವಿಷಯದ ಬಗ್ಗೆ ಮಾತಾಡಿದಾಗ ಪುನಃ ಸಿಡುಕಿದ ಅವರು, ಅದನ್ನು ಸಿದ್ದರಾಮಯ್ಯ ಜೊತೆ ಮಾತಾಡಿ ಬಗೆಹರಿಸಿಕೊಳ್ಳುವುದಾಗಿ ಹೇಳಿದರು. ಲಿಂಗಾಯತ ಅಧಿಕಾರಿಗಳು ಬೇಕೆನ್ನುವ ವಾದಕ್ಕೆ ಅವರು ಜೋತುಬಿದ್ದಿರೋದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ದಾವಣಗೆರೆ: ಕಾಂಗ್ರೆಸ್ ನಾಯಕರು ಅದರಲ್ಲೂ ವಿಶೇಷವಾಗಿ ಶಾಮನೂರು ಶಿವಶಂಕರಪ್ಪ (Shamanur Shivashankarappa), ಬಸವರಾಜ ರಾಯರೆಡ್ಡಿ, ಕೆಎನ್ ರಾಜಣ್ಣ, ಬಿಕೆ ಹರಿಪ್ರಸಾದ್ (BK Hariprasad) ಮೊದಲಾದ ಹಿರಿಯ ತಮ್ಮ ಮಾತಿಗೆ, ವಾದಕ್ಕೆ ಜೋತು ಬೀಳುವುದನ್ನು ಅಭ್ಯಾಸ ಮಾಡಿಕೊಂಡಂತಿದೆ. 93-ವರ್ಷ ವಯಸ್ಸಿನ ಶಿವಶಂಕರಪ್ಪ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ (Siddaramaiah government) ಲಿಂಗಾಯತ ಶಾಸಕ ಮತ್ತು ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಅಂತ ಹೇಳಿ ಆಶ್ಚರ್ಯ ಹುಟ್ಟಿಸಿದ್ದರು. ಅದಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಸಮಜಾಯಿಷಿ ನೀಡಿ ಯಾರಿಗೂ ಅನ್ಯಾಯವಾಗುತ್ತಿಲ್ಲ ಅಂದಿದ್ದರು. ಏತನ್ಮಧ್ಯೆ, ಕೆಲ ಕಾಂಗ್ರೆಸ್ ಶಾಸಕರು ಮತ್ತು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಶಿವಶಂಕರಪ್ಪನವರನ್ನು ತರಾಟೆಗೆ ತೆಗೆದುಕೊಂಡರು. ಚಿಕ್ಕಪುಟ್ಟ ನಾಯಕರು ಸಹ ತನ್ನ ವಿರುದ್ಧ ಮಾತಾಡುತ್ತಿರುವುದರಿಂದ ಸಿಡಿಮಿಡಿಗೊಳ್ಳುತ್ತಿರುವ ಶಿವಶಂಕರಪ್ಪನವರಿಗೆ ಮಾಧ್ಯಮ ಪ್ರತಿನಿಧಿಗಳು ಅದೇ ವಿಷಯದ ಬಗ್ಗೆ ಮಾತಾಡಿದಾಗ ಪುನಃ ಸಿಡುಕಿದ ಅವರು, ಅದನ್ನು ಸಿದ್ದರಾಮಯ್ಯ ಜೊತೆ ಮಾತಾಡಿ ಬಗೆಹರಿಸಿಕೊಳ್ಳುವುದಾಗಿ ಹೇಳಿದರು. ಲಿಂಗಾಯತ ಅಧಿಕಾರಿಗಳು ಬೇಕೆನ್ನುವ ವಾದಕ್ಕೆ ಅವರು ಜೋತುಬಿದ್ದಿರೋದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.