ಬೆಳಗಾವಿ ಅಧಿವೇಶನ: ಬರದಿಂದ ಸಂಕಷ್ಟದಲ್ಲಿರುವ ಜನರ ಬಗ್ಗೆ ಚರ್ಚಿಸದೆ ಧರಣಿ ನಡೆಸುವ ಪ್ರತಿಪಕ್ಷ ಶಾಸಕರಿಗೆ ನಾಚಿಕೆಯಾಗಬೇಕು: ಸಿದ್ದರಾಮಯ್ಯ
ಬರದ ಸ್ಥಿತಿಯಿಂದ ಕಂಗೆಟ್ಟು ಹೊಟ್ಟೆಪಾಡಿಗಾಗಿ ಕೆಲಸಗಳನ್ನು ಅರಸುತ್ತಾ ಪಟ್ಟಣ ಪ್ರದೇಶಗಳಿಗೆ ಗುಳೆ ಎದ್ದು ಹೋಗುತ್ತಿರುವ ಜನರನ್ನು ತಡೆಗಟ್ಟಲು ಉದ್ಯೋಗ ಖಾತ್ರಿ ಯೋಜನೆಯನ್ನು 150 ದಿನಗಳಿಗೆ ಹೆಚ್ಚಿಸುವ ತುರ್ತು ಅವಶ್ಯಕತೆಯಿದೆ, ಬಿಜೆಪಿ ಶಾಸಕರಿಗೆ ಜನರ ಬಗ್ಗೆ ಕಾಳಜಿಯಿದ್ದರೆ, ಕೇಂದ್ರ ಸರ್ಕಾರ ಮೇಲೆ ಒತ್ತಡ ಹೇರಿ ಉದ್ಯೋಗ ಖಾತ್ರಿಯ ಯೋಜನೆ ದಿನಗಳನ್ನು 150 ಹೆಚ್ಚಿಸುವ ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿ: ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಧರಣಿಯ ನಡುವ ರಾಜ್ಯದ ಬರದ ಸ್ಥಿತಿಯ ಬಗ್ಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah ) ಯಾವುದೇ ಭಾಗದಲ್ಲಿ ಜನರಿಗೆ ಮತ್ತು ದನಕರುಗಳಿಗೆ ಕುಡಿಯುವ ನೀರು (drinking water) ಮತ್ತು ಮೇವಿನ ತೊಂದರೆಯಾಗದ ಹಾಗೆ ರೂ. 800-900 ಕೋಟಿ ಹಣವನ್ನು ಎಲ್ಲ ಜಿಲ್ಲಾಧಿಕಾರಿ (deputy commissioners) ಮತ್ತು ತಹಸೀಲ್ದಾರ್ ಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು. ಉದ್ಯೋಗ ಖಾತರಿ ಯೋಜನೆ ಅಡಿ 100 ದಿನ ಉದ್ಯೋಗ ಕಲ್ಪಿಸಲಾಗುತ್ತಿದೆ, ಆದರೆ ಬರ ಮತ್ತು ಪ್ರವಾಹದಂಥ ಸ್ಥಿತಿ ತಲೆದೋರಿದಾಗ ಉದ್ಯೋಗ ಖಾತ್ರಿ ಯೋಜನೆಯನ್ನು 150 ದಿನಗಳಿಗೆ ವಿಸ್ತರಿಸುವ ಅವಕಾಶ ಕಾನೂನಲ್ಲೇ ಇದೆ, ಅದಕ್ಕಾಗಿ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ತಾನು ಮತ್ತು ಕಂದಾಯ ಸಚಿವ ಎರಡು ತಿಂಗಳು ಹಿಂದೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದರೂ ಇದುವೆರೆಗೆ ಅಲ್ಲಿಂದ ಉತ್ತರ ಬಂದಿಲ್ಲ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ವಿಷಯದ ಬಗ್ಗೆ ಚರ್ಚೆ ಮಾಡದೆ ಯಾವುದೋ ಕೆಲಸಕ್ಕೆ ಬಾರದ ವಿಷಯ ಮುಂದಿಟ್ಟುಕೊಂಡು ಧರಣಿ ನಡೆಸುತ್ತಿರುವ ಪ್ರತಿಪಕ್ಷಗಳ ಶಾಸಕರಿಗೆ ನಾಚಿಕೆಯಾಗಬೇಕು ಅಂತ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ