ಶಿವರಾಜ್ ಕುಮಾರ್, ಗೀತಾ ವಿವಾಹ ವಾರ್ಷಿಕೋತ್ಸವದ ಸಂಭ್ರಮ ಹೀಗಿತ್ತು

|

Updated on: May 19, 2024 | 7:40 PM

ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರ ವಿವಾಹ ವಾರ್ಷಿಕೋತ್ಸವ ಇಂದು (ಮೇ 19). ಆಪ್ತೇಷ್ಟರು ಈ ಆದರ್ಶ ದಂಪತಿಗೆ ವಾರ್ಷಿಕೋತ್ಸವದ ಶುಭ ಹಾರೈಸಿದರು. ಇಲ್ಲಿದೆ ನೋಡಿ ವಿಡಿಯೋ.

ಶಿವರಾಜ್ ಕುಮಾರ್ (Shiva Rajkumar) ಹಾಗೂ ಗೀತಾ ಶಿವರಾಜ್ ಕುಮಾರ್ ಅವರ ವಿವಾಹ ವಾರ್ಷಿಕೋತ್ಸವ ಇಂದು (ಮೇ 19) ಈ ಜೋಡಿ ವಿವಾಹವಾಗಿ ಇಂದಿಗೆ 38 ವರ್ಷಗಳಾಗಿವೆ. ಶಿವಣ್ಣ-ಗೀತಕ್ಕನವರ ಹಲವು ಆಪ್ತರು ಅವರ ನಿವಾಸಕ್ಕೆ ಭೇಟಿ ನೀಡಿ ಜೋಡಿಗೆ ಶುಭಾಶಯ ಕೋರಿದರು. ಆಪ್ತರ ಒತ್ತಾಯದ ಮೇರೆಗೆ ಶಿವಣ್ಣ-ಗೀತಕ್ಕ ಪರಸ್ಪರ ಹಾರಗಳನ್ನು ಬದಲಾಯಿಸಿಕೊಂಡರು. ಶಿವರಾಜ್ ಕುಮಾರ್ ಅವರ ಜೋಡಿ ಚಿತ್ರರಂಗದ ಹಿರಿಯ ಜೋಡಿ ಮಾತ್ರವಲ್ಲ ಆದರ್ಶ ಜೋಡಿ ಸಹ. ಎಲ್ಲಿಗೇ ಹೋದರು ಇಬ್ಬರೂ ಒಟ್ಟಿಗೆ ಹೋಗುತ್ತಾರೆ. ಪರಸ್ಪರರಿಗೆ ಬೆಂಬಲ ನೀಡುತ್ತಾ ಬರುತ್ತಿದ್ದಾರೆ. ಇದೀಗ ಗೀತಾ ಶಿವರಾಜ್ ಕುಮಾರ್ ಚುನಾವಣೆಗೆ ಸ್ಪರ್ಧಿಸಿದ್ದು, ಶಿವಣ್ಣ ಪತ್ನಿಯ ಪರವಾಗಿ ಪ್ರಚಾರ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ