ರಾಮನಗರದಲ್ಲಿ ಕಾರ್ಯಕರ್ತರ ಮುಂದೆ ನಾನೇ ಮುಂದಿನ ಮುಖ್ಯಮಂತ್ರಿ ಎಂದರು ಶಿವಕುಮಾರ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 23, 2022 | 5:26 PM

ಕೆಲ ಸಾರ್ವಜನಿಕ ಸಮಾರಂಭಗಳಲ್ಲಿ ಶಿವಕುಮಾರ ತಾವು ಮುಖ್ಯಮಂತ್ರಿ ಅಭ್ಯರ್ಥಿ ಅಂತ ಹೇಳುತ್ತಿದ್ದರೆ ಸಿದ್ದರಾಮಯ್ಯ ಅದೇ ಮಾತನ್ನು ತಮ್ಮ ಬೆಂಬಲಿಗರ ಮೂಲಕ ಹೇಳಿಸುತ್ತಿದ್ದಾರೆ.

ರಾಮನಗರ:  ಒಂದು ವೇಳೆ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ, ಮುಖ್ಯಮಂತ್ರಿ ಯಾರೆನ್ನುವುದು ಈಗ ವಿವಾದದ ರೂಪ ತಳೆಯಲಾರಂಭಿಸಿದೆ. ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ (DK Shivakumar) ನಡುವಿನ ಶೀತಲ ಸಮರ ಈಗ ಬಹಿರಂಗವಾಗಿ ನಡೆಯುತ್ತಿದೆ. ಕೆಲ ಸಾರ್ವಜನಿಕ ಸಮಾರಂಭಗಳಲ್ಲಿ ಶಿವಕುಮಾರ ತಾವು ಮುಖ್ಯಮಂತ್ರಿ ಅಭ್ಯರ್ಥಿ ಅಂತ ಹೇಳುತ್ತಿದ್ದರೆ ಸಿದ್ದರಾಮಯ್ಯ ಅದೇ ಮಾತನ್ನು ತಮ್ಮ ಬೆಂಬಲಿಗರ ಮೂಲಕ ಹೇಳಿಸುತ್ತಿದ್ದಾರೆ. ರಾಮನಗರದಲ್ಲಿ ಶನಿವಾರ ಕಾರ್ಯಕರ್ತರನ್ನು ಭೇಟಿ ಮಾಡುವಾಗ ಶಿವಕುಮಾರ ನೀವೆಲ್ಲ ಜೊತೆಗಿದ್ದರೆ ಇದ್ದರೆ ನಾನೇ ಸಿಎಂ ಎಂದಿದ್ದಾರೆ.