ಭಾರತ ಜೋಡೋ ಯಾತ್ರೆ ಕರ್ನಾಟಕ ಲೆಗ್ನಲ್ಲಿ ರಾಹುಲ್ ಗಾಂಧಿಯ ಬಲಭಾಗದಲ್ಲಿ ಶಿವಕುಮಾರ ಎಡಕ್ಕೆ ಸಿದ್ದರಾಮಯ್ಯ!
ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯ ಕರ್ನಾಟಕ ಲೆಗ್ ಶುಕ್ರವಾರದಿಂದ ಆರಂಭವಾಗಿದೆ.
ಚಾಮರಾಜನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ (Rahul Gandhi ) ಭಾರತ್ ಜೋಡೋ ಯಾತ್ರೆಯ (Bharat Jodo Yatra) ಕರ್ನಾಟಕ ಚಾಪ್ಟರ್ ಆರಂಭಗೊಂಡಿದೆ. ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ (Gundlupet) ಅವರು ರಾಜ್ಯದ ಪ್ರಮುಖ ನಾಯಕರು- ಡಿಕೆ ಶಿವಕುಮಾರ, ಸಿದ್ದರಾಮಯ್ಯ, ಎಂ ಬಿ ಪಾಟೀಲ್, ಪರಮೇಶ್ವರ ಮತ್ತು ಇನ್ನು ಹಲವಾರು ನಾಯಕರು ಮತ್ತು ಅಸಂಖ್ಯಾತ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಗುಂಡ್ಲುಪೇಟೆಯ ಪ್ರಮುಖ ರಸ್ತೆಯಲ್ಲಿ ಪಾದಯಾತ್ರೆ ಮಾಡುತ್ತಿರುವುದನ್ನು ವಿಡಿಯೋನಲ್ಲಿ ನೋಡಬಹುದು.