ಶಿವಮೊಗ್ಗ ಅ.22: ಶಿವಮೊಗ್ಗ ದಸರಾ (Shivmogga Dasara) ಮಹೋತ್ಸವ ಅಂಗವಾಗಿ ಇಂದು (ಅ.22) ನಗರದ ಕುವೆಂಪು ರಂಗಮಂದಿರ ಆವರಣದಲ್ಲಿ ಯೋಗ ದಸರಾ (Yoga Dasara) ಆಯೋಜಿಸಲಾಗಿದೆ. ಈ ಯೋಗ ದಸರಾವನ್ನು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ (UT Khadar) ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಾನು 6ನೇ ತರಗತಿಯಿಂದ ಯೋಗಾಸನ ಮಾಡುತ್ತಿದ್ದೇನೆ. ಆಗಿನಿಂದಲೂ ನನಗೆ ಯೋಗದ ಪರಿಚಯವಿದೆ. ನನ್ನ ತಾಯಿಯವರ ತಂದೆ, ನನ್ನ ಅಜ್ಜ ಯೋಗ ಗುರುವಿಗೆ ಕರೆ ತರುತ್ತಿದ್ದರು. ಎಲ್ಲರೂ ಯೋಗಾಸನ ಮಾಡಬೇಕು. ಯೋಗಾಸನ ಆರೋಗ್ಯಕ್ಕೆ ಒಳ್ಳೆಯದು. ಯೋಗ ದಸರಾದಲ್ಲಿ ಭಾಗಿಯಾಗಿದ್ದ ಸಾವಿರಾರು ಯೋಗಪಟುಗಳೊಂದಿಗೆ ಯುಟಿ ಖಾದರ್ ಕೂಡ ಯೋಗಾಸನ ಮಾಡಿದರು.