ತಮಿಳು ಸರಿಗಮಪದಲ್ಲಿ ರಜನಿ ಫೇವರಿಟ್ ಹಾಡು ಹಾಡಿದ ಕನ್ನಡದ ಶಿವಾನಿ; ಜಡ್ಜ್ಗಳು ಶಾಕ್
ಕನ್ನಡದ ಶಿವಾನಿ ಅವರು ತಮಿಳು ಸರಿಗಮಪ ಶೋನಲ್ಲಿ ಮಿಂಚುತ್ತಿದ್ದಾರೆ. ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ರಜನಿಕಾಂತ್ ಸಿನಿಮಾ ಹಾಡನ್ನು ಅದ್ಭುತವಾಗಿ ಹಾಡಿದ್ದಾರೆ. ಈ ಹಾಡು ಸಾಕಷ್ಟು ಗಮನ ಸೆಳೆದಿದೆ. ಎಲ್ಲರೂ ಅವರಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅವರ ಕಂಠಕ್ಕೆ ಅನೇಕರು ಮಾರು ಹೋಗಿದ್ದಾರೆ.
ಕನ್ನಡದ ಸರಿಗಮಪ ಶೋನಲ್ಲಿ ಗಮನ ಸೆಳೆದ ಶಿವಾನಿ ಅವರು ಈಗ ತಮಿಳು ಸರಿಗಮಪ ವೇದಿಕೆ ಮೇಲೆ ಮಿಂಚುತ್ತಿದ್ದಾರೆ. ಅವರು ರಜನಿಕಾಂತ್ ಅವರ ‘ವಾ ವಾ ಪಕ್ಕಮ್ ವಾ..’ ಹಾಡನ್ನು ಹಾಡಿದ್ದಾರೆ. ಈ ಹಾಡು ರಜನಿಕಾಂತ್ ಸಿನಿಮಾದ್ದು. ಇದು ಹಳೆಯ ಸಾಂಗ್. ‘ಕೂಲಿ’ ಸಿನಿಮಾದಲ್ಲೂ ಇದು ಬಳಕೆ ಆಗಿತ್ತು. ಶಿವಾನಿ ಹಾಡೋದನ್ನು ಕೇಳಿ ಎಲ್ಲರೂ ಶಾಕ್ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Sep 19, 2025 10:50 AM